ಭಾರತದ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ ಅಭ್ಯುದಯ್ ಮಿಶ್ರಾ ರಸ್ತೆ ಅಪಘಾತದಲ್ಲಿ ಮೃತ್ಯು

Update: 2022-09-29 12:20 GMT
ಅಭ್ಯುದಯ್ ಮಿಶ್ರಾ (Photo: instagram)

ಹೊಸದಿಲ್ಲಿ: ಭಾರತದ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ (YouTuber), 'ಸ್ಕೈಲಾರ್ಡ್' (Skylord) ಎಂದೇ ಚಿರಪರಿಚಿತರಾದ ಅಭ್ಯುದಯ್ ಮಿಶ್ರಾ (Abhiyuday Mishra) ಅವರು ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.

'ಪಬ್‍ಜೀ' ಯಂತಹುದೇ ಮೊಬೈಲ್ ಗೇಮ್‍ಗಳಿಗಾಗಿನ ಮಲ್ಟಿಪ್ಲೇಯರ್ ಶೂಟರ್ ಗೇಮ್ 'ಗರೇನಾ ಫ್ರೀ ಫೈರ್' ನ ತಮ್ಮ ಗೇಮ್‍ಪ್ಲೇ ಕುರಿತು ಅವರು ಯೂಟ್ಯೂಬ್‍ಗೆ ವೀಡಿಯೋಗಳನ್ನು ಅಪ್‍ಲೋಡ್ ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

ಇನ್‍ಸ್ಟಾಗ್ರಾಮ್‍ನಲ್ಲಿ ಅವರಿಗೆ 4.24 ಲಕ್ಷ ಫಾಲೋವರ್ಸ್ ಇದ್ದು ಅವರ ಕೊನೆಯ ಪೋಸ್ಟ್ ನಲ್ಲಿ ಅವರು ಸೆಲ್ಫೀ ಒಂದನ್ನು ಹಾಕಿ "ಮಧ್ಯ ಪ್ರದೇಶ. ದಿ ಹಾರ್ಟ್ ಆಫ್ ಇನ್‍ಕ್ರೆಡಿಬಲ್ ಇಂಡಿಯಾ,'' ಎಂದು ಬರೆದಿದ್ದರು. ಯೂಟ್ಯೂಬ್‍ನಲ್ಲಿ ಅವರಿಗೆ 10.64 ಲಕ್ಷ ಫಾಲೋವರ್ಸ್ ಇದ್ದು ಅವರ ಕೊನೆಯ ವೀಡಿಯೋ ಎರಡು ವಾರಗಳ ಹಿಂದೆ ಅಪ್‍ಲೋಡ್ ಆಗಿತ್ತು.

ತಮ್ಮ ಬಳಗದೊಂದಿಗೆ ಮೋಟಾರ್ ಸೈಕಲ್‍ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಭೋಪಾಲದಿಂದ ಸುಮಾರು 122 ಕಿಮೀ ದೂರದ ಸೋಹಗಪುರ್ ರಾಜ್ಯ ಹೆದ್ದಾರಿಯಲ್ಲಿ ಅವರ ಬೈಕಿಗೆ ಟ್ರಕ್ ಒಂದು ಢಿಕ್ಕಿಯಾಗಿತ್ತು. ಮಧ್ಯ ಪ್ರದೇಶ ಸರಕಾರ ಪ್ರವರ್ತಿತ, ಪ್ರವಾಸೋದ್ಯಮ ಉತ್ತೇಜನದ ಬೈಕ್ ಯಾತ್ರೆಯಲ್ಲಿ ಮಿಶ್ರಾ ಮತ್ತವರ ಬಳಗ ಪಾಲ್ಗೊಂಡಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಈ ಬೈಕ್ ಯಾತ್ರೆ ಸೆಪ್ಟೆಂಬರ್ 21 ರಂದು ಖಜುರಾಹೋದಿಂದ ಆರಂಭಗೊಂಡಿತ್ತು.

ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಜೈಲು ಪಾಲಾದ  2 ಗಂಟೆಗಳಲ್ಲಿ ಜಾಮೀನು ಪಡೆದ ಉತ್ತರಪ್ರದೇಶ ಸಚಿವ ಅಗರ್ವಾಲ್, ಬಿಜೆಪಿ ಶಾಸಕ ಸೈನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News