ಕಥೆಗಾರರ ಪ್ರತಿಭಾನ್ವೇಷನೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಡೈಲಿ ಹಂಟ್‌ ಮತ್ತು AMG ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್

Update: 2022-09-29 14:46 GMT

ಹೊಸದಿಲ್ಲಿ: ಭಾರತದ ನಂಬರ್‌ 1 ಸ್ಥಳೀಯ ಭಾಷಾ ವಿಷಯಗಳ ಕುರಿತ ವೇದಿಕೆಯಾದ ಡೈಲಿಹಂಟ್‌ ಮತ್ತು AMG ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ನಡೆಸಿದ #StoryForGlory ಯು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದೊಂದಿಗೆ ಮುಕ್ತಾಯ ಕಂಡಿತು. ರಾಷ್ಟ್ರವ್ಯಾಪಿ ನಡೆದ ಈ ಕಾರ್ಯಕ್ರಮವು ವೀಡಿಯೊ ಮತ್ತು ಮುದ್ರಣ ಎಂಬ ಎರಡು ವಿಭಾಗದಲ್ಲಿ ಒಟ್ಟು ಹನ್ನೆರಡು ಮಂದಿ ವಿಜೇತರನ್ನು ಘೋಷಿಸಿದೆ. 

ಕಾರ್ಯಕ್ರಮವು ಮೇ ತಿಂಗಳಿನಲ್ಲಿ ಪ್ರಾರಂಭವಾಗಿದ್ದು, ನಾಲ್ಕು ತಿಂಗಳುಗಳ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿತ್ತು. ಇವುಗಳಲ್ಲಿ 20 ಮಂದಿ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲಾಗಿತ್ತು. ಇವರಿಗೆ ಎಂಟು ವಾರಗಳ ಫೆಲೋಶಿಪ್‌ ಹಾಗೂ ಪ್ರಮುಖ ಮಾಧ್ಯಮ ಸಂಸ್ಥೆ MICAದಲ್ಲಿ ಎರಡು ವಾರಗಳ ತರಬೇತಿಯನ್ನೂ ನೀಡಲಾಯಿತು. ತರಬೇತಿಯ ಬಳಿಕ ಪ್ರಮುಖ ಮಾಧ್ಯಮ ಸಂಸ್ಥೆಗಳಿಂದ ಮಾಹಿತಿ-ಮಾರ್ಗದರ್ಶನ ಪಡೆದರು. 

ಅಂತಿಮವಾಗಿ 20 ಅಭ್ಯರ್ಥಿಗಳಲ್ಲಿ 12  ಮಂದಿಯನ್ನು ಆಯ್ಕೆ ಮಾಡಿ ವಿಜೇತರನ್ನಾಗಿ ಘೋಷಿಸಲಾಯಿತು. ಡೈಲಿಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತಾ, ಸಿಇಒ ಮತ್ತು ಎಎಮ್‌ಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಮುಖ್ಯ ಸಂಪಾದಕ ಸಂಜಯ್ ಪುಗಾಲಿಯಾ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಗೋಯೆಂಕಾ, ಫಿಲ್ಮ್‌ ಸಾಥಿ ಸಂಸ್ಥಾಪಕಿ ಅನುಪಮಾ ಚೋಪ್ರಾ, ಶಿದಪೀಪಲ್‌ ಸ್ಥಾಪಕಿ ಶೆಲ್ಲಿ ಚೋಪ್ರಾ, ಗಾಂವ್‌ ಕನೆಕ್ಷನ್‌ ಸ್ಥಾಪಕ ನೀಲೇಶ್‌ ಮಿಶ್ರಾ, ಫ್ಯಾಕ್ಟರ್‌ ಡೈಲಿ ಸಂಸ್ಥಾಪಕ ಪಂಕಜ್‌ ಮಿಶ್ರಾ ತೀರ್ಪುಗಾರರಾಗಿ ಭಾಗವಹಿಸಿದರು.

DailyHunt ಭಾರತದ #1 ಸ್ಥಳೀಯ ಭಾಷೆಯ ವಿಷಯ ವೇದಿಕೆಯಾಗಿದ್ದು, ಪ್ರತಿದಿನ 15 ಭಾಷೆಗಳಲ್ಲಿ 1 ಮಿಲಿಯನ್‌ ಗೂ ಹೆಚ್ಚು ಹೊಸ ವಿಚಾರಗಳನ್ನು ನೀಡುತ್ತದೆ. DailyHunt ನಲ್ಲಿನ ವಿಷಯವು 50000+ ಕಂಟೆಂಟ್‌ ಪಾರ್ಟ್ನರ್‌ ಗಳು ಮತ್ತು 50000+ ಕ್ಕೂ ಹೆಚ್ಚು ಕ್ರಿಯೇಟರ್‌ಗಳಿಂದ ನಡೆಸಲ್ಪಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News