×
Ad

ಉಡುಪಿ ನಗರದಲ್ಲಿ ಭಿಕ್ಷಾಟನೆ ನಿರತ 10 ಮಂದಿಯ ರಕ್ಷಣೆ

Update: 2022-09-29 20:38 IST

ಉಡುಪಿ, ಸೆ.29: ಉಡುಪಿ ನಗರದ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿಸಿದ್ದ ಒಟ್ಟು 10 ಮಂದಿಯನ್ನು ಗುರುವಾರ ರಕ್ಷಿಸಿ ಮಂಗಳೂರಿನ ನಿರಾಶ್ರೀತರ ಪರಿಹಾರ ಕೇಂದ್ರಕ್ಕೆ ದಾಖಲಿಸಲಾಗಿದೆ.

ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ವಿ.ಮಡ್ಲೂರ್, ಪ್ರತಾಂಕಿತ ವ್ಯವಸ್ಥಾಪಕ ರೋಷನ್ ಕುಮಾರ್, ಹಾಗೂ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ದಿನ್ನಿ, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಅಶೋಕ್ ಶೆಟ್ಟಿ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣ ಘಟಕದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಜಿಲ್ಲಾಸ್ಪತ್ರೆ, ಸರ್ವಿಸ್ ಬಸ್ ನಿಲ್ದಾಣ, ರಥಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಕ್ಷಾಟನೆ ಮಾಡುತ್ತಿದ್ದ ಸುಮಾರು 10 ಜನರನ್ನು ರಕ್ಷಣೆ ಮಾಡಿದ್ದಾರೆ. ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿ, ಮಹಿಳೆ ಹಾಗೂ ಮಕ್ಕಳು ಕಂಡು ಬಂದಲ್ಲಿ 1098ಕ್ಕೆ ಕರೆ ಮಾಡುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News