ಮ್ಯಾನ್ಮಾರ್: 5.2 ತೀವ್ರತೆಯ ಭೂಕಂಪ

Update: 2022-09-30 17:09 GMT

ಯಾಂಗಾನ್, ಸೆ.30: ಮ್ಯಾನ್ಮಾರ್ನಲ್ಲಿ ಶುಕ್ರವಾರ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ. 

ಮ್ಯಾನ್ಮಾರ್ನ 162 ಕಿ.ಮೀ ವಾಯವ್ಯದಲ್ಲಿ, 140 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ನಾಶನಷ್ಟದ ವರದಿಯಾಗಿಲ್ಲ. ಅಸ್ಸಾಂ, ಮಣಿಪುರ, ಮೇಘಾಲಯ ಸೇರಿದಂತೆ ಭಾರತದ ಹಲವು ಈಶಾನ್ಯ ರಾಜ್ಯಗಳಲ್ಲೂ ಕಂಪನದ ಅನುಭವವಾಗಿದೆ. ಕೆಲ ಸಮಯದ ಬಳಿಕ 3.8 ತೀವ್ರತೆಯ ಭೂಕಂಪ ಇದೇ ವಲಯದಲ್ಲಿ ಸಂಭವಿಸಿದ್ದು ಇದರ ಕೇಂದ್ರಬಿಂದು ಮಣಿಪುರದ ಕಮ್ಜೋಂಗ್ ಪ್ರದೇಶವಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News