ಕೇರಳದ ಐವರು ಆರೆಸ್ಸೆಸ್ ನಾಯಕರಿಗೆ ವೈ ಕೆಟಗರಿ ಭದ್ರತೆ ಒದಗಿಸಿದ ಕೇಂದ್ರ ಸರಕಾರ

Update: 2022-10-01 06:48 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕೇಂದ್ರ ಸರಕಾರವು ಕೇರಳದ ಐದು ಮಂದಿ ಆರೆಸ್ಸೆಸ್ ನಾಯಕರಿಗಿರಬಹುದಾದ(RSS Leaders) ಸಂಭಾವ್ಯ ಬೆದರಿಕೆಗಳ ಹಿನ್ನೆಲೆಯಲ್ಲಿ ಅವರಿಗೆ ವೈ ಕೆಟಗರಿ ಭದ್ರತೆಯನ್ನು('Y' Category Security) ಒದಗಿಸಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ನಿಷೇಧಕ್ಕೊಳಗಾದ ಪಿಎಫ್‍ಐ ಕಚೇರಿಗಳ ಮೇಲೆ ನಡೆದ ದಾಳಿ ವೇಳೆ ದೊರೆತ ದಾಖಲೆಗಳ ಆಧಾರದಲ್ಲಿ ಈ ಐದು ಮಂದಿ ನಾಯಕರ ಮೇಲೆ ಪಿಎಫ್‍ಐ ಕಣ್ಣಿಟ್ಟಿತ್ತು ಎಂಬ ಮಾಹಿತಿಯ ಆಧಾರದಲ್ಲಿ ಅವರಿಗೆ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಕೇಂದ್ರೀಯ ತನಿಖಾ ಮತ್ತು ಗುಪ್ತಚರ ಏಜನ್ಸಿಗಳು  ಮಾಹಿತಿ ನೀಡಿವೆ ಎನ್ನಲಾಗಿದೆ.

ಈ ನಾಯಕರಿಗೆ ಭದ್ರತೆ ಒದಗಿಸುವ ಕೆಲಸವನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಐಪಿ ಭದ್ರತಾ ಘಟಕಕ್ಕೆ ವಹಿಸಲಾಗಿದೆ.

ಐವರಲ್ಲಿ ಪ್ರತಿಯೊಬ್ಬರಿಗೆ ಇಬ್ಬರಿಂದ ಮೂವರು ಶಸ್ತ್ರಸಜ್ಜಿತ ಕಮಾಂಡೋಗಳು ರಕ್ಷಣೆ ಒದಗಿಸಲಿದ್ದಾರೆ ಎನ್ನಲಾಗಿದೆ.

ಕೆಲ ತಿಂಗಳುಗಳ ಹಿಂದೆ ಬಿಹಾರದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಭಾರೀ ಪ್ರತಿಭಟನೆಗಳ ಬಳಿಕ ಬಿಹಾರ ಬಿಜೆಪಿ ಅಧ್ಯಕ್ಷ ಹಾಗೂ ಪಶ್ಚಿಮ ಚಂಪಾರಣ್ ಸದಸ್ಯ ಸಂಜಯ್ ಜೈಸ್ವಾಲ್ ಅವರಿಗೂ ಇದೇ ರೀತಿ ಭದ್ರತೆ ಒದಗಿಸಲಾಗಿತ್ತು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ 'PayCM' ಟೀಶರ್ಟ್ ಧರಿಸಿದ್ದ ಯುವಕನ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News