8 ನಗರಗಳಲ್ಲಿ 5G ಟೆಲಿಕಾಂ ಸೇವೆಗಳನ್ನುಆರಂಭಿಸಿದ ಏರ್ ಟೆಲ್

Update: 2022-10-01 08:21 GMT

ಹೊಸದಿಲ್ಲಿ: ಭಾರ್ತಿ ಏರ್‌ಟೆಲ್ ಶನಿವಾರ ನಾಲ್ಕು ಮಹಾನಗರಗಳು ಸೇರಿದಂತೆ ಎಂಟು ನಗರಗಳಲ್ಲಿ 5G ಟೆಲಿಕಾಂ ಸೇವೆಗಳನ್ನು ಆರಂಭಿಸುತ್ತಿದೆ ಹಾಗೂ  ಮಾರ್ಚ್ 2024 ರ ವೇಳೆಗೆ ಇಡೀ ದೇಶವನ್ನು ಹಂತಹಂತವಾಗಿ ಆವರಿಸಲಿದೆ ಎಂದು ಏರ್ ಟೆಲ್  ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ IMC 2022 ರಲ್ಲಿ ಮಾತನಾಡಿದ ಮಿತ್ತಲ್, ದೇಶದ ಅತ್ಯಂತ ಹಳೆಯ ಖಾಸಗಿ ಟೆಲಿಕಾಂ ಆಪರೇಟರ್ ಎಂಟು ಪ್ರಮುಖ ನಗರಗಳಲ್ಲಿ 5G ಮೊಬೈಲ್ ಸೇವೆಗಳನ್ನು ಆರಂಭಿಸುತ್ತಿದೆ. ಮಾರ್ಚ್ 2023 ರ ವೇಳೆಗೆ ಹೆಚ್ಚಿನ ಭಾಗಗಳನ್ನು ಹಾಗೂ  ಮಾರ್ಚ್ 2024 ರ ವೇಳೆಗೆ ಇಡೀ ದೇಶವನ್ನು 5 ಜಿ ಆವರಿಸುತ್ತದೆ ಎಂದು ಹೇಳಿದರು.

2023ರ ವೇಳೆಗೆ ದೇಶಾದ್ಯಂತ 5G ಸೇವೆ: ಅಂಬಾನಿ ಭರವಸೆ

ತಮ್ಮ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಡಿಸೆಂಬರ್ 2023 ರ ವೇಳೆಗೆ ದೇಶಾದ್ಯಂತ 5G ಸೇವೆಗಳನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಕಂಪೆನಿ ಮುಖ್ಯಸ್ಥ ಮುಖೇಶ್ ಅಂಬಾನಿ ಶನಿವಾರ ಘೋಷಿಸಿದ್ದಾರೆ.

ಈ ತಿಂಗಳೊಳಗೆ 5G ಸೇವೆಗಳನ್ನು ಹೊರತರಲು ಜಿಯೋ ಕೆಲಸ ಮಾಡುತ್ತಿದೆ.

IMC 2022 ಈವೆಂಟ್‌ನಲ್ಲಿ ಮಾತನಾಡಿದ ಅಂಬಾನಿ, "ಜಿಯೋ ಕೈಗೆಟುಕುವ 5G ಸೇವೆಗಳನ್ನು ಆರಂಭಿಸುತ್ತದೆ ಹಾಗೂ  ಡಿಸೆಂಬರ್ 2023 ರ ವೇಳೆಗೆ ದೇಶದ ಮೂಲೆ ಮೂಲೆಗಳನ್ನು 5 ಜಿ ತಲುಪಲಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News