Mercedes Benz ಕಾರು ಖರೀದಿಸಲು ನನಗೂ ಸಾಧ್ಯವಿಲ್ಲ ಎಂದ ನಿತಿನ್ ಗಡ್ಕರಿ

Update: 2022-10-01 10:34 GMT

ಮುಂಬೈ: ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಮರ್ಸಿಡಿಸ್-ಬೆನ್ಜ್‌ಗೆ ಸ್ಥಳೀಯವಾಗಿ ಹೆಚ್ಚಿನ ಕಾರುಗಳನ್ನು ಉತ್ಪಾದಿಸುವಂತೆ ಶುಕ್ರವಾರ ವಿನಂತಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಂತಹ ಕ್ರಮವು ಕೈಗೆಟುಕುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಒತ್ತಿ ಹೇಳಿದರು.

Mercedes-Benz ಇಂಡಿಯಾದ ಮೊದಲ ಸ್ಥಳೀಯವಾಗಿ ಜೋಡಿಸಲಾದ EQS 580 4MATIC EV ಅನ್ನು ಪುಣೆಯಲ್ಲಿನ ಚಕನ್ ಉತ್ಪಾದನಾ ಘಟಕದಿಂದ ಬಿಡುಗಡೆಗೊಳಿಸಿ ಮಾತನಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾಗಿರುವ ಗಡ್ಕರಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದೊಡ್ಡ ಮಾರುಕಟ್ಟೆ ಇದೆ ಎಂದು ಹೇಳಿದರು.

"ನೀವು ಉತ್ಪಾದನೆಯನ್ನು ಹೆಚ್ಚಿಸಿ, ಆಗ ಮಾತ್ರ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ. ನಾವು ಮಧ್ಯಮ ವರ್ಗದ ಜನರು, ನಿಮ್ಮ ಕಾರನ್ನು ನನಗೆ ಕೂಡಾ ಖರೀದಿಸಲು ಸಾಧ್ಯವಿಲ್ಲ" ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News