ಅ. 25 ರಿಂದ ದಿಲ್ಲಿಯಲ್ಲಿ ಮಾಲಿನ್ಯ ಪ್ರಮಾಣ ಪತ್ರ ಇಲ್ಲದವರಿಗೆ ಪೆಟ್ರೋಲ್, ಡೀಸೆಲ್ ಇಲ್ಲ!

Update: 2022-10-01 10:15 GMT

ಹೊಸದಿಲ್ಲಿ: ದಿಲ್ಲಿ ಸರಕಾರವು ಪೆಟ್ರೋಲ್ ಹಾಗೂ  ಡೀಸೆಲ್ ಅನ್ನು ಭರ್ತಿ ಮಾಡುವ ಪೆಟ್ರೋಲ್ ಬಂಕ್ ಗಳಲ್ಲಿ ಮಾಲಿನ್ಯ ನಿಯಂತ್ರಣ  ಪ್ರಮಾಣಪತ್ರವನ್ನು(ಪಿಯುಸಿ)  ಕಡ್ಡಾಯಗೊಳಿಸಿದೆ. ಪಿಯುಸಿ ಪ್ರಮಾಣಪತ್ರ ಇಲ್ಲದವರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಕೊಡದೆ ಇರಲು ಎಎಪಿ ಸರಕಾರ ನಿರ್ಧರಿಸಿದೆ.

ಅಕ್ಟೋಬರ್ 25 ರಿಂದ ರಾಷ್ಟ್ರ ರಾಜಧಾನಿಯ ಪೆಟ್ರೋಲ್ ಪಂಪ್‌ಗಳಲ್ಲಿ ಮಾಲಿನ್ಯ ನಿಯಂತ್ರಣ  ಪ್ರಮಾಣಪತ್ರ(ಪಿಯುಸಿ)Pollution Under Control (PUC)ಇಲ್ಲದೆ ಪೆಟ್ರೋಲ್ ಹಾಗೂ  ಡೀಸೆಲ್ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಗೋಪಾಲ್ ರೈ ಶನಿವಾರ ಹೇಳಿದ್ದಾರೆ.

ಈ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ರೈ ಹೇಳಿದರು.

ಸೆಪ್ಟೆಂಬರ್ 29 ರಂದು ಪರಿಸರ, ಸಾರಿಗೆ ಮತ್ತು ಸಂಚಾರ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಆ ಸಭೆಯಲ್ಲಿ ಅಕ್ಟೋಬರ್ 25 ರಿಂದ ಯೋಜನೆ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News