60 ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಉ.ಪ್ರ. ಸರಕಾರದಿಂದ ನೋಟಿಸ್: 57 ಲಕ್ಷ ರೂ. ಪಾವತಿಸುವಂತೆ ಸೂಚನೆ

Update: 2022-10-01 11:47 GMT
File Photo: PTI

ಲಕ್ನೋ: ಪೌರತ್ವ ತಿದ್ದುಪಡಿ ಕಾಯಿದೆಯ (CAA) ವಿರುದ್ಧದ ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿದ್ದಾರೆಂಬ ಕಾರಣಕ್ಕಾಗಿ ರೂ. 57 ಲಕ್ಷ ಪರಿಹಾರ ಪಾವತಿಸುವಂತೆ ಸೂಚಿಸಿ ಉತ್ತರ ಪ್ರದೇಶದ (Uttar Pradesh) ಬಿಜ್ನೋರ್‌ ಜಿಲ್ಲೆಯ  ಪೊಲೀಸರು 60 ಮಂದಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು PTI ವರದಿ ಮಾಡಿದೆ.

ಡಿಸೆಂಬರ್‌ 20, 2019 ರಂದು ನಡೆದ ಪ್ರತಿಭಟನೆಗಳ ವೇಳೆ ಗುಂಪೊಂದು ಸಾರ್ವಜನಿಕ ಆಸ್ತಿಗೆ ಹಾನಿಯೆಸಗಿದ್ದೇ ಅಲ್ಲದೆ ಪೊಲೀಸ್‌ ಜೀಪ್‌ ಒಂದಕ್ಕೂ ಬೆಂಕಿ ಹಚ್ಚಿತ್ತು, ಉದ್ರಿಕ್ತ ಗುಂಪು ಪೊಲೀಸರ ಮೇಲೆಯೂ ಹಲ್ಲೆ ಮಾಡಿದ್ದರಿಂದ ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಗೋಲಿಬಾರ್ ವೇಳೆ ಅನಾಸ್‌ ಮತ್ತು ಸಲ್ಮಾನ್‌ ಎಂಬ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದರು.

ಡಿಸೆಂಬರ್‌ 2020 ರಲ್ಲಿ ರಾಜ್ಯದಲ್ಲಿ ಸಿಎಎ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಂತರ ಹಲವರಿಗೆ ನೋಟಿಸ್‌ ಜಾರಿಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯೆಸಗಿದ್ದಕ್ಕಾಗಿ ದಂಡ ಪಾವತಿಸುವಂತೆ ಸೂಚಿಸಿತ್ತು.

ಆದರೆ ಇಂತಹ ನೋಟಿಸ್‌ಗಳನ್ನು ವಾಪಸ್‌ ಪಡೆಯುವಂತೆ ಸುಪ್ರೀಂ ಕೋರ್ಟ್‌ ತನ್ನ ಫೆಬ್ರವರಿ 11 ರ ಆದೇಶದಲ್ಲಿ  ಸೂಚಿಸಿದ ನಂತರ ಫೆಬ್ರವರಿ 18 ರಂದು ನ್ಯಾಯಾಲಯಕ್ಕೆ ಉತ್ತರ ನೀಡಿದ್ದ ರಾಜ್ಯ ಸರ್ಕಾರ ಇಂತಹ 274 ನೋಟಿಸ್‌ಗಳನ್ನು ವಾಪಸ್‌ ಪಡೆದುಕೊಂಡಿದ್ದಾಗಿ ತಿಳಿಸಿತ್ತು. ಹಣ ಪಾವತಿಸಿದವರಿಗೆ ವಾಪಸ್‌ ನೀಡುವಂತೆಯೂ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಅದೇ ಸಮಯ ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿಗೆ ವೆಚ್ಚ ಭರಿಸುವ ಕಾಯಿದೆಯಡಿ ನೋಟಿಸ್‌ ಜಾರಿಗೊಳಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಈ ಕಾಯಿದೆಯನ್ನು 2020 ರಲ್ಲಿ ರಾಜ್ಯದಲ್ಲಿ ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ: ದಾವಣಗೆರೆ: ರೀಲ್ಸ್ ಮಾಡಲು ಚೆಕ್ ಡ್ಯಾಂ ಬಳಿ ಹೋದ ಇಬ್ಬರು ಯುವಕರು ನೀರು ಪಾಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News