5ಜಿ ಡಿಜಿಟಲ್‌ ಕಾಮಧೇನುವಿನಂತೆ: ಮುಕೇಶ್‌ ಅಂಬಾನಿ

Update: 2022-10-01 12:25 GMT
ಮುಕೇಶ್‌ ಅಂಬಾನಿ (PTI)

ಹೊಸದಿಲ್ಲಿ: ದೇಶದಲ್ಲಿ 5G ಸೇವೆಗಳಿಗೆ ಚಾಲನೆ ನೀಡಲಾದ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಇಂದು ಮಾತನಾಡಿದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (Reliance Industries) ಅಧ್ಯಕ್ಷ ಮುಕೇಶ್‌ ಅಂಬಾನಿ(Mukesh Ambani), ʻʻಈ 5ಜಿ ಸೇವೆಗಳು ದೇಶದ ಪ್ರಗತಿಗೆ ವೇಗ ನೀಡಿ ಇಂದಿನ 3 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಿಂದ ದೇಶವನ್ನು 2047ರಲ್ಲಿ 40 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿಸಲಿದೆ. ದೇಶದ ಜನರ ತಲಾ ಆದಾಯವನ್ನು 2000 ಡಾಲರ್‌ನಿಂದ 20,000 ಡಾಲರ್‌ಗೆ ಅದು ಏರಿಸಲಿದೆ, ಆದುದರಿಂದ ಈ 5ಜಿ ನಮಗೆ ಬೇಕಿದ್ದುದನ್ನು ನೀಡುವ ದೈವಾಂಶಸಂಭೂತ ಗೋವು- ಡಿಜಿಟಲ್‌ ಕಾಮಧೇನುವಿನಂತೆ ಎಂದು ಹೇಳುವುದು ಉತ್ಪ್ರೇಕ್ಷೆಯಾಗಲಾರದು," ಎಂದು ಹೇಳಿದರು.

ಡಿಸೆಂಬರ್‌ 2023 ರ ವೇಳೆಗೆ 5ಜಿ ಸೇವೆಯನ್ನು ಪ್ರತಿ ಪಟ್ಟಣ, ತಾಲೂಕು ಮತ್ತು ತೆಹ್ಸಿಲ್‌ ಮಟ್ಟದಲ್ಲಿ ರಿಲಯನ್ಸ್‌ ಜಿಯೋ(Reliance Jio) ಒದಗಿಸಲಿದೆ ಎಂದು ಅವರು ಹೇಳಿದರು.

5ಜಿ ಸೇವೆಗಳಿಗೆ ಅಗತ್ಯವಿರುವ ಹೆಚ್ಚಿನದನ್ನು ಭಾರತದಲ್ಲಿಯೇ ಮಾಡಲಾಗಿರುವುದರಿಂದ ಅದು ಆತ್ಮನಿರ್ಭರ್‌ ಭಾರತ್‌ ಮುದ್ರೆಯನ್ನೂ ಹೊಂದಿದೆ ಎಂದು ಅವರು ಹೇಳಿದರು.

ʻʻಭಾರತದಲ್ಲಿ 5ಜಿ ಸೇವೆಗಳನ್ನು ಆರಂಭಿಸುವಲ್ಲಿ ಸ್ವಲ್ಪ ತಡವಾಗಿರಬಹುದು ಆದರೆ  ದೇಶದ ಉದ್ದಗಲಕ್ಕೂ ಈ ಸೇವೆಯನ್ನು ವಿಸ್ತರಿಸಿ ಪೂರ್ಣಗೊಳಿಸುವವರಲ್ಲಿ ನಾವು ಮೊದಲಿಗರಾಗಲಿದ್ದೇವೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ,ʼʼ ಎಂದು ಹೇಳಿದ ಅವರು ʻʻಜಗತ್ತಿನ ಎಲ್ಲಿಯೂ ಇರದ ಅತ್ಯುತ್ಕೃಷ್ಟ ಗುಣಮಟ್ಟ ಮತ್ತು ಕೈಗೆಟಕುವ ಬೆಲೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ,ʼʼ ಎಂಬ ಆಶ್ವಾಸನೆಯನ್ನೂ ನೀಡಿದರು.

ಇದನ್ನೂ ಓದಿ: 60 ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಉ.ಪ್ರ. ಸರಕಾರದಿಂದ ನೋಟಿಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News