ಡೆಮಾಕ್ರಟಿಕ್ ಆಝಾದ್ ಪಾರ್ಟಿಯ ಅಧ್ಯಕ್ಷರಾಗಿ‌ ಗುಲಾಂ ನಬಿ ಆಝಾದ್ ಆಯ್ಕೆ

Update: 2022-10-01 15:59 GMT
PHOTO: PTI

ಜಮ್ಮು,ಅ.1: ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಝಾದ್ ಅವರು ತಾನು ಹೊಸದಾಗಿ ಸ್ಥಾಪಿಸಿರುವ ಡೆಮಾಕ್ರಟಿಕ್ ಆಝಾದ್ ಪಾರ್ಟಿ (ಡಿಎಪಿ)ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ನಾಯಕರೋರ್ವರು ಶನಿವಾರ ತಿಳಿಸಿದರು.ಜಮ್ಮು ಮತ್ತು ಶ್ರೀನಗರಗಳಲ್ಲಿ ನಡೆದ ಸ್ಥಾಪಕ ಸದಸ್ಯರ ಅಧಿವೇಶನದಲ್ಲಿ ಆಝಾದ್ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

ಆ.26ರಂದು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಆಝಾದ್ (73) ಸೆ.26ರಂದು ಜಮ್ಮುವಿನಲ್ಲಿ ಹಲವಾರು ಮಾಜಿ ಸಚಿವರು,ಮಾಜಿ ಶಾಸಕರು ಮತ್ತು ಇತರ ಗಣ್ಯ ನಾಯಕರ ಬೆಂಬಲದೊಂದಿಗೆ ಡಿಎಪಿಯನ್ನು ಹುಟ್ಟುಹಾಕಿದ್ದರು. ಈ ಪೈಕಿ ಹೆಚ್ಚಿನವರು ಆಝಾದ್ರನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News