ನವರಾತ್ರಿ ಆಚರಣೆಗೆ ಸಂಬಂಧಿಸಿದಂತೆ 2 ಸಮುದಾಯಗಳ ನಡುವೆ ಹೊಡೆದಾಟ; ವೀಡಿಯೊ ವೈರಲ್

Update: 2022-10-03 06:05 GMT
Photo:NDTV

ಭೋಪಾಲ್: ನವರಾತ್ರಿ ಆಚರಣೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ರವಿವಾರ ಎರಡು ಸಮುದಾಯಗಳ ನಡುವೆ ದೊಣ್ಣೆಗಳಿಂದ ತೀವ್ರ ಹೊಡೆದಾಟ ನಡೆದಿದೆ ಎನ್ನಲಾದ ಘಟನೆಯ ವೀಡಿಯೊ ವ್ಯಾಪಕವಾಗಿ ಶೇರ್ ಆಗುತ್ತಿದೆ.

ಪೊಲೀಸರ ಪ್ರಕಾರ, ಭೋಪಾಲ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಅಗರ್ ಜಿಲ್ಲೆಯ ಕಂಕರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದ ಕಾರಣಕ್ಕೆ ಮೇಲ್ಜಾತಿ ಎಂದು ಕರೆಯಲ್ಪಡುವವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮದ ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಗರ್ಬಾ ಕಾರ್ಯಕ್ರಮಕ್ಕಾಗಿ ಇಬ್ಬರು ಹುಡುಗಿಯರು ಮಾಡಿದ ಅಶ್ಲೀಲ ನೃತ್ಯದ ಬಗ್ಗೆ ಜಗಳ ಆರಂಭವಾಯಿತು ಎಂದು ಇನ್ನೊಂದು ಸಮುದಾಯದವರು ಹೇಳಿದ್ದಾರೆ ಎಂದು ವರದಿಯಾಗಿದೆ.

“ಒಂದು ಹಾಡು-ನೃತ್ಯ ಕಾರ್ಯಕ್ರಮವು ಜಗಳಕ್ಕೆ ಕಾರಣವಾಯಿತು. ನಾವು ಎರಡೂ ಕಡೆಯಿಂದ ದೂರುಗಳನ್ನು ದಾಖಲಿಸಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ನವಲ್ ಸಿಂಗ್ ಸಿಸೋಡಿಯಾ ಹೇಳಿದ್ದಾರೆ.

"ಹೊಡೆದಾಟಕ್ಕೆ ಕೋಲುಗಳನ್ನು ಬಳಸಲಾಗಿದೆ. ಮೂವರನ್ನು ಬಂಧಿಸಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ,'' ಎಂದು ಸಿಸೋಡಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News