ಗುರುಗ್ರಾಮ್ ಕಟ್ಟಡ ಕುಸಿತ: ಇಬ್ಬರು ಕಾರ್ಮಿಕರು ಮೃತ್ಯು

Update: 2022-10-03 06:38 GMT
Photo:PTI

ಗುರುಗ್ರಾಮ್: ಗುರುಗ್ರಾಮ್‌ನಲ್ಲಿ ಸೋಮವಾರ ಹಳೆಯ ಕಾರ್ಖಾನೆಯ ಕಟ್ಟಡವನ್ನು ಕೆಡವುವ ವೇಳೆ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಉದ್ಯೋಗ್ ವಿಹಾರ್ ಹಂತ 1 ರಲ್ಲಿ ಸುಮಾರು 8 ಗಂಟೆಗೆ ಹನ್ನೆರಡು ಕಾರ್ಮಿಕರು ಹಳೆಯ ಕಾರ್ಖಾನೆಯ ಕಟ್ಟಡವನ್ನು ಕೆಡವುವ ಕೆಲಸವನ್ನು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಸೆಪ್ಟೆಂಬರ್ 26 ರಿಂದ ಸ್ಥಳದಲ್ಲಿ ನೆಲಸಮ ಕಾರ್ಯ ನಡೆಯುತ್ತಿದ್ದು, ಇಂದಿನವರೆಗೂ ಮೂರು ಅಂತಸ್ತಿನ ಕಾರ್ಖಾನೆಯ ಎರಡು ಮಹಡಿಗಳನ್ನು ಕೆಡವಲಾಗಿದೆ. ಕಟ್ಟಡದ ಅಂತಿಮ ಮಹಡಿ ಕುಸಿದಾಗ ಕೆಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ.

ಒಟ್ಟು ನಾಲ್ವರು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಕಟ್ಟಡ ಕುಸಿತದಿಂದ  ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News