ಅ.6ರಿಂದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇರ ನೇಮಕಾತಿಗೆ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ

Update: 2022-10-03 14:50 GMT
ಸಾಂದರ್ಭಿಕ ಚಿತ್ರ

ಉಡುಪಿ, ಅ.3: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ವೃಂದದ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 1:2 ತಾತ್ಕಾಲಿಕ ಪರಿಶೀಲನಾ ಪಟ್ಟಿ -schooleducation.kar.nic.in- ಇದರಲ್ಲಿ ಪ್ರಕಟವಾಗಿದೆ. 

ಈ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಆಡಳಿತ) ಕಚೇರಿಗೆ ಕೆಳಕಂಡ ದಿನಾಂಕದಂದು ಖುದ್ಧಾಗಿ ಹಾಜರಾಗಲು ಡಿಡಿಪಿಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.6ರಂದು ಬೆಳಗ್ಗೆ ಸಮಾಜ ಪಾಠಗಳು ಅಭ್ಯರ್ಥಿಗಳ ನೊಂದಣಿ ಸಂಖ್ಯೆ 1ರಿಂದ 40 (ಒಟ್ಟು 40 ಮಂದಿ), ಅದೇ ದಿನ -ಅಪರಾಹ್ನ ಸಮಾಜ ಪಾಠಗಳು -41ರಿಂದ 100 (60). ಅ.7ರಂದು ಪೂರ್ವಾಹ್ನ- ಸಮಾಜ ಪಾಠಗಳು- 101ರಿಂದ 150 (50), ಅದೇ ದಿನ ಅಪರಾಹ್ನ- ಸಮಾಜ ಪಾಠಗಳು- 151ರಿಂದ 181(31).

ಅ.7ರಂದು ಅಪರಾಹ್ನ- ಗಣಿತ ಮತ್ತು ವಿಜ್ಞಾನ- 1ರಿಂದ 20 (20), ಅ.10ರಂದು ಬೆಳಗ್ಗೆ -ಗಣಿತ ಮತ್ತು ವಿಜ್ಞಾನ- 21ರಿಂದ 70 (50), ಅದೇ ದಿನ ಅಪರಾಹ್ನ -ಗಣಿತ ಮತ್ತು ವಿಜ್ಞಾನ- 71ರಿಂದ 120(50). ಅ.11ರಂದು ಬೆಳಗ್ಗೆ -ಗಣಿತ ಮತ್ತು ವಿಜ್ಞಾನ- 121ರಿಂದ 177 (57). 

ಅ.11ರಂದು ಅಪರಾಹ್ನ- ಜೀವಶಾಸ್ತ್ರ- 1ರಿಂದ 23(23), ಅದೇ ದಿನ ಅಪರಾಹ್ನ- ಆಂಗ್ಲಭಾಷೆ- 1ರಿಂದ 36 (36). ಒಟ್ಟಾರೆಯಾಗಿ 417 ಮಂದಿ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಈ ದಿನಗಳಲ್ಲಿ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News