ಉಡುಪಿ: ಅ.4ರಂದು ಕಸ ಸಂಗ್ರಹಣೆ ಇಲ್ಲ

Update: 2022-10-03 14:54 GMT
ಸಾಂದರ್ಭಿಕ ಚಿತ್ರ

ಉಡುಪಿ, ಅ.3: ಆಯಧ ಪೂಜೆಯ ಪ್ರಯುಕ್ತ ಅ.4ರ ಮಂಗಳವಾರ ನಗರಸಭೆ ವತಿಯಿಂದ ಮನೆ-ಮನೆಯಿಂದ ಕಸ ಸಂಗ್ರಹಣೆ ಇರುವುದಿಲ್ಲ. ಸಾರ್ವಜನಿಕರು ಮನೆಯ ಕಸವನ್ನು ಮನೆಯಲ್ಲಿಯೇ ಶೇಖರಿಸಿಟ್ಟುಕೊಂಡು ಮರುದಿನ ನಗರಸಭೆಯ ಮನೆ ಮನೆ ಸಂಗ್ರಹಣೆಯ ವಾಹನಕ್ಕೆ ನೀಡಬೇಕು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News