ಮಂಗಳೂರು: ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನ ದಶಮಾನೋತ್ಸವ ಆಚರಣೆ

Update: 2022-10-03 17:20 GMT

ಮಂಗಳೂರು, ಅ.3: ನಗರದ ಕಂಕನಾಡಿ ಬೈಪಾಸ್ ರಸ್ತೆಯ ಬಳಿಯಿರುವ ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನ ದಶಮಾನೋತ್ಸವ ಆಚರಣೆ ಕಾರ್ಯಕ್ರಮವು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನ ಮಳಿಗೆಯಲ್ಲಿ ಸೋಮವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೊಹ್ತಿಶಾಮ್ ಗ್ರೂಪ್‌ನ ನಿರ್ದೇಶಕ ಎಸ್.ಎಂ. ಸವೂದ್, ಎಸ್‌ಆರ್‌ಆರ್ ಮಸಾಲಾ ಕಂಪೆನಿಯ ನಿರ್ದೇಶಕ ರಜನೀಶ್, ಬಿಎಎಸ್‌ಎಫ್ ಇಂಡಿಯಾ (ಲಿ) ಮಂಗಳೂರು ಇದರ ನಿವೃತ್ತ ಸೈಟ್ ಡೈರಕ್ಟರ್ ಪಿ. ಪುರಂದರ ಶೆಟ್ಟಿ, ಚಾರ್ಟಡ್ ಅಕೌಂಟೆಂಟ್ ನಿತಿನ್ ಜೆ. ಶೆಟ್ಟಿ, ದ.ಕ.ಜಿಪಂ ಮಾಜಿ ಸದಸ್ಯ, ಉದ್ಯಮಿ ಎನ್.ಎಸ್.ಕರೀಂ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಹ್ಯುಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷ ನಾಸಿರ್ ಅಹ್ಮದ್ ಸಾಮಣಿಗೆ ಅವರು ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನ ವಿವಿಧ ವಿನ್ಯಾಸ ಆಭರಣಗಳನ್ನು ಗ್ರಾಹಕರ ಸಮ್ಮುಖ ಅನಾವರಣಗೊಳಿಸಿದರು.

ಈ ಸಂದರ್ಭ ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ ಎಕ್ಸಿಕ್ಯೂಟಿವ್ ಡೈರಕ್ಟರ್ ಟಿ.ಎಂ. ಅಬ್ದುಲ್ ರವೂಫ್, ಜನರಲ್ ಮ್ಯಾನೇಜರ್ ಉನ್ನಿತ್ತಾನ್ ಎ.ಕೆ., ರೀಜನಲ್ ಮ್ಯಾನೇಜರ್ ಸುಮೇಶ್ ಕೆ., ಲತೀಶ್ ಸಾಲ್ಯಾನ್, ಬ್ರಾಂಚ್ ಮ್ಯಾನೇಜರ್ ಅಬ್ದುಲ್ ಸತ್ತಾರ್, ಸೇಲ್ಸ್ ಮ್ಯಾನೇಜರ್ ಫೈಝಲ್ ಉಪಸ್ಥಿತರಿದ್ದರು.

ಸೀನಿಯರ್ ಮ್ಯಾನೇಜರ್  ಕೆ.ಎಸ್. ಮುಸ್ತಫಾ ಕಕ್ಕಿಂಜೆ ವಂದಿಸಿದರು. ಸಾಹಿಲ್ ಝಾಹೀರ್ ಕಾರ್ಯಕ್ರಮ ನಿರೂಪಿಸಿದರು.

2023ರ ಜನವರಿ 31ರವರೆಗೆ ಆ್ಯಂಟಿಕ್ ಬ್ರೈಡಲ್ ಫೆಸ್ಟಿವಲ್

ದಶಮಾನೋತ್ಸವದ ಪ್ರಯುಕ್ತ ಆರಂಭಿಸಲಾದ ‘ಆ್ಯಂಟಿಕ್ ಬ್ರೈಡಲ್ ಫೆಸ್ಟಿವಲ್’ಗೆ (ಮದುಮಗಳ ವಿಶೇಷ ಆಭರಣ ಹಬ್ಬ) ಸೋಮವಾರ ಚಾಲನೆ ನೀಡಲಾಯಿತು. ಈ ಹಬ್ಬವು 2023ರ ಜನವರಿ 31ರವರೆಗೆ ನಡೆಯಲಿದೆ.

ಈ ಸಂದರ್ಭ ಸುಲ್ತಾನ್ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರಕ್ಟರ್ ಟಿ.ಎಂ ಅಬ್ದುಲ್ ರಹೀಂ ಅವರು ಹಲವು ಲಕ್ಕಿ ಡ್ರಾಗಳ ಕೊಡುಗೆಯನ್ನು ಘೋಷಿಸಿದರು.

2,000 ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಖರೀದಿಗೆ  ಲಕ್ಕಿ ಡ್ರಾ ಕೂಪನ್‌ಗಳು ದೊರೆಯಲಿದೆ. ಬ್ರೈಡಲ್ ಖರೀದಿಗೆ ಹೆಚ್ಚಿನ ಕೂಪನ್‌ಗಳು ದೊರೆಯುತ್ತವೆ. ಪ್ರತೀ ದಿನ ಐದು ಲಕ್ಕಿ ಡ್ರಾ ವಿಜೇತರಿಗೆ 5 ಕುಕ್ಕರ್, ವಾರದ ಲಕ್ಕಿ ಡ್ರಾ ವಿಜೇತರಿಗೆ ಮಿಕ್ಸಿ, ಫ್ಯಾನ್, ತಿಂಗಳ ಲಕ್ಕಿ ಡ್ರಾ ವಿಜೇತರಿಗೆ ಫ್ರಿಡ್ಜ್, ಟಿವಿ, ವಾಶಿಂಗ್ ಮೆಷಿನ್ ಹಾಗೂ ಕೊನೆಯ ಬಂಪರ್ ಡ್ರಾ ವಿಜೇತರಿಗೆ ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಕಾರು ನೀಡಲಾಗುವುದು.

ಮಂಗಳೂರು, ಸುರತ್ಕಲ್ ಮತ್ತು ಉಡುಪಿ ಶೋರೂಂಗಳಲ್ಲಿ ಆ್ಯಂಟಿಕ್ ಬ್ರೈಡಲ್ ಫೆಸ್ಟಿವಲ್ ವೇಳೆ ಖರೀದಿಸಲಾಗುವ ಡೈಮಂಡ್ ಕ್ಯಾರೆಟ್ ಮೇಲೆ 8,000 ರೂ. ಕೊಡುಗೆ, ಚಿನ್ನಾಭರಣ ಗೋಲ್ಡ್ ಮೇಕಿಂಗ್ ಚಾರ್ಜ್‌ನಲ್ಲಿ ಶೇ.50ರವರೆಗೆ ರಿಯಾಯಿತಿ ದರ ಕೂಡ ನೀಡಲಾಗುವುದು.

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಕಾಂಟೆಂಪರರಿ ಬ್ರೈಡಲ್ ಕಲೆಕ್ಷನ್‌ಗಳ ಜತೆಗೆ  ಅಪಾರ ಶ್ರೇಣಿಯ ನವೀನ ವಿನ್ಯಾಸ ಹಾಗೂ ನೂತನ ಟ್ರೆಂಡ್ಸ್‌ನ ಪ್ರೀಮಿಯಂ ಆ್ಯಂಟಿಕ್ ಜ್ಲುವೆಲ್ಲರ್ಸ್‌ ಸಂಗ್ರಹ ಹೊಂದಿದೆ ಎಂದು ಸುಲ್ತಾನ್ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರಕ್ಟರ್ ಟಿ.ಎಂ. ಅಬ್ದುಲ್ ರಹೀಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News