ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ ರವೀಶ್ ಕುಮಾರ್: NDTV ಭವಿಷ್ಯದ ಬಗ್ಗೆ ಮತ್ತೆ ಬಿಸಿಬಿಸಿ ಚರ್ಚೆ

Update: 2022-10-04 07:06 GMT

ಹೊಸದಿಲ್ಲಿ: NDTVಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ರವರು ತಾವೇ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸುವುದಾಗಿ ತಮ್ಮ ಸಾಮಾಜಿಕ ತಾಣದ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಅದಾನಿ ಸಂಸ್ಥೆಯು NDTVಯ ಶೇರುಗಳನ್ನು ಖರೀದಿಸುವ ಕುರಿತಾದ ವಿಚಾರಗಳ ನಡುವೆಯೇ ರವೀಶ್ ಕುಮಾರ್ ರವರ ಈ ಹೇಳಿಕೆ ಮಾಧ್ಯಮ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.

ತಮ್ಮ ಖಾತೆಯಲ್ಲಿ ಅವರು, "ಇದು ನನ್ನ ಯೂಟ್ಯೂಬ್ ಚಾನಲ್. ನಾನು ನನ್ನ ಕೈಗಳನ್ನು ಸ್ವಚ್ಛಗೊಳಿಸುತ್ತಿದ್ದೇನೆ. ಮೆಲ್ಲನೇ ವೇಗ ಹೆಚ್ಚಾಗಲಿದೆ. ಕೆಲವೊಮ್ಮೆ ಪಾಡ್‌ಕಾಸ್ಟ್ ರೂಪದಲ್ಲಿ, ಕೆಲವೊಮ್ಮೆ ವೀಡಿಯೊ ರೂಪದಲ್ಲಿ" ಎಂದು ಬರೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News