'ಆದಿ ಪುರುಷ್' ನಿರ್ದೇಶಕರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಮಧ್ಯಪ್ರದೇಶ ಸಚಿವ

Update: 2022-10-04 10:43 GMT
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ (PTI)

ಭೋಪಾಲ್: ಹಿಂದು ಧಾರ್ಮಿಕ ಪಾತ್ರಗಳನ್ನು 'ತಪ್ಪಾಗಿ' ಬಿಂಬಿಸಿದ ದೃಶ್ಯಗಳನ್ನು ತೆಗೆದುಹಾಕದೇ ಇದ್ದರೆ ಬಾಲಿವುಡ್ ಚಿತ್ರ 'ಆದಿ ಪುರಷ್'(Adipurush) ತಯಾರಕರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ(Madhya Pradesh Home Minister Narottam Mishra) ನೀಡಿದ್ದಾರೆ.

ಓಂ ರಾವತ್ ನಿರ್ದೇಶನದ ಈ ಚಲಚಿತ್ರದ ಟೀಸರ್-ಟ್ರೈಲರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ರಾಮಾಯಣ ಮಹಾಕಾವ್ಯದ ಆಧರಿತ ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರಧಾರಿಯಾಗಿದ್ದರೆ, ಸೈಫ್ ಆಲಿ ಖಾನ್ ಅವರು ರಾವಣನಾಗಿ ಹಾಗೂ ಕೃತಿ ಸೆನೋನ್ ಅವರು ಸೀತೆ ಪಾತ್ರಧಾರಿಯಾಗಿದ್ದಾರೆ.

"ನಾನು ಆದಿಪುರುಷ್ ಟ್ರೈಲರ್ ನೋಡಿದ್ದೇನೆ. ಅದರಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ,'' ಎಂದು ರಾಜ್ಯ ಸರ್ಕಾರದ ವಕ್ತಾರರೂ ಆಗಿರುವ ಮಿಶ್ರಾ ಹೇಳಿದರು.

ಟ್ರೈಲರ್ ನಲ್ಲಿ ಕಾಣಿಸಿರುವಂತೆ ಹಿಂದೂ ದೇವ, ದೇವತೆಗಳ ಉಡುಗೆತೊಡುಗೆಗಳು ಸ್ವೀಕಾರಾರ್ಹವಲ್ಲ,'' ಎಂದು ಅವರು ಹೇಳಿದರು.

"ಚಿತ್ರದಲ್ಲಿ ಹನುಮಾನ್‍ಜಿ ಚರ್ಮದ ಉಡುಪು ಧರಿಸಿದಂತೆ ತೋರಿಸಲಾಗಿದೆ, ಆದರೆ ಪುರಾಣದಲ್ಲಿ ಹನುಮಾನ್ ಉಡುಗೆ ಬೇರೆ ಆಗಿದೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ದೃಶ್ಯಗಳಿವೆ. ಇಂತಹ ಎಲ್ಲಾ ದೃಶ್ಯಗಳನ್ನು ತೆಗೆದುಹಾಕುವಂತೆ ಸೂಚಿಸಿ ಓಂ ರಾವತ್ ಅವರಿಗೆ ಪತ್ರ ಬರೆಯುತ್ತೇನೆ. ಅವರು ಅದಕ್ಕೆ ತಕ್ಕಂತೆ ನಡೆದುಕೊಳ್ಳದೇ ಇದ್ದರೆ ಕಾನೂನು ಕ್ರಮ ಪರಿಗಣಿಸಲಾಗುವುದು,'' ಎಂದು ಅವರು ಹೇಳಿದರು.

ಇದನ್ನೂ ಓದಿ: ಅಮೆರಿಕಾದಲ್ಲಿ 8 ತಿಂಗಳ ಮಗುವಿನ ಸಹಿತ ಭಾರತ ಮೂಲದ ನಾಲ್ವರ ಅಪಹರಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News