ಇಂದು ಮುಂಬೈನಲ್ಲಿ ಶಿವಸೇನೆ ಬಣಗಳಿಂದ ಎರಡು ದಸರಾ ರ‍್ಯಾಲಿ, ಶಕ್ತಿ ಪ್ರದರ್ಶನಕ್ಕೆ ಸಜ್ಜು

Update: 2022-10-05 07:08 GMT
Photo:PTI

ಮುಂಬೈ: 56 ವರ್ಷಗಳ ಹಿಂದೆ ಶಿವಸೇನೆ  ಆರಂಭವಾದ ನಂತರ ಮೊದಲ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ  Maharashtra Chief Minister Eknath Shinde ಹಾಗೂ ಮಾಜಿ ಸಿಎಂ  ಉದ್ಧವ್ ಠಾಕ್ರೆ Uddhav Thackeray  ನೇತೃತ್ವದ ಪಕ್ಷದ ಪ್ರತಿಸ್ಪರ್ಧಿ ಬಣಗಳಿಂದ ಬುಧವಾರ ಸಂಜೆ ಮುಂಬೈನಲ್ಲಿ ಎರಡು ದಸರಾ ರ್ಯಾಲಿಗಳು ನಡೆಯಲಿವೆ. ಇದು  ಜೂನ್‌ನಲ್ಲಿ ಸರಕಾರ ಬದಲಾದ ನಂತರ ಎರಡೂ ಬಣಗಳಿಂದ ಶಕ್ತಿ ಪ್ರದರ್ಶನ ಎಂದು ಬಿಂಬಿಸಲಾಗಿದೆ.

ಶಿವಾಜಿ ಪಾರ್ಕ್ ಹಾಗೂ  ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಬಿಕೆಸಿ) ಸೇನಾ ಬಣಗಳ ರ್ಯಾಲಿಗಳಲ್ಲಿ ಭಾರೀ  ಜನ ಸೇರುವ ನಿರೀಕ್ಷೆಯಲ್ಲಿ ಮುಂಬೈ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

 ಎರಡು ಪ್ರತಿಸ್ಪರ್ಧಿ ಶಿವಸೇನೆ ಬಣಗಳ ಬೆಂಬಲಿಗರನ್ನು ತಮ್ಮ ದಸರಾ ರ್ಯಾಲಿಗಳಿಗೆ ಕರೆದೊಯ್ಯಲು 5,000 ಕ್ಕೂ ಹೆಚ್ಚು ಬಸ್‌ಗಳು, ಹಲವಾರು ಸಣ್ಣ ಪ್ರವಾಸಿ ವಾಹನಗಳು, ಕಾರುಗಳು  ಹಾಗೂ  ವಿಶೇಷ ರೈಲನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರ್ಯಾಲಿಗಳು ರಾಜಕೀಯ ವಲಯಗಳಲ್ಲಿ ಮತ್ತು ಸಾಮಾನ್ಯ ನಾಗರಿಕರಲ್ಲಿ ತೀವ್ರ ಆಸಕ್ತಿಯನ್ನು ಹುಟ್ಟುಹಾಕಿವೆ ಹಾಗೂ ಶತ್ರುಗಳಾಗಿ ಬದಲಾಗಿರುವ ಮಿತ್ರರಿಬ್ಬರ ಭಾಷಣಗಳಿಗಿಂತ ಎರಡು ಪ್ರತಿಸ್ಪರ್ಧಿ ಬಣಗಳು ದಿವಂಗತ ಬಾಳಾ ಠಾಕ್ರೆಯವರಿಂದ ಸ್ಥಾಪಿಸಲ್ಪಟ್ಟ ಪಕ್ಷದಲ್ಲಿ ತಮ್ಮದೇ  'ನಿಜವಾದ' ಶಿವಸೇನೆ ಎಂದು ತೋರಿಸಲು ಪ್ರಯತ್ನ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News