×
Ad

ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ಅನ್ವಯವಾಗುವ ಜನಸಂಖ್ಯಾ ನೀತಿಯ ಅಗತ್ಯವಿದೆ: ಮೋಹನ್ ಭಾಗವತ್

Update: 2022-10-05 12:43 IST
Photo: PTI

ಹೊಸದಿಲ್ಲಿ: ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ಅನ್ವಯವಾಗುವ ಸಮಗ್ರ ಜನಸಂಖ್ಯಾ ನೀತಿಯ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಬುಧವಾರ ಹೇಳಿದ್ದಾರೆ. 

ನಾಗಪುರದಲ್ಲಿ ಆರೆಸ್ಸೆಸ್ ನ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡಿದ ಭಾಗವತ್, ಹೊಸ ಜನಸಂಖ್ಯಾ ನೀತಿ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು ಎಂದರು.

ಜನಸಂಖ್ಯೆಯು ಬೆಳೆಯಲು ಸಂಪನ್ಮೂಲಗಳ ಅಗತ್ಯವಿದೆ. ಸಂಪನ್ಮೂಲಗಳನ್ನು ನಿರ್ಮಿಸದೆ ಜನಸಂಖ್ಯೆ ಬೆಳೆದರೆ  ಅದು ಹೊರೆಯಾಗುತ್ತದೆ. ಜನಸಂಖ್ಯೆಯನ್ನು ಆಸ್ತಿ ಎಂದು ಪರಿಗಣಿಸುವ ಮತ್ತೊಂದು ದೃಷ್ಟಿಕೋನವಿದೆ. ನಾವು ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಅನ್ವಯಿಸುವ  ಜನಸಂಖ್ಯಾ ನೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ ಆರ್ಎಸ್ಎಸ್ ಮುಖ್ಯಸ್ಥರು, "ನಾವು ಮಹಿಳೆಯರನ್ನು ಸಮಾನತೆಯಿಂದ ನೋಡಬೇಕು ಹಾಗೂ  ಅವರ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯದೊಂದಿಗೆ ಅವರನ್ನು ಸಬಲೀಕರಣಗೊಳಿಸಬೇಕಾಗಿದೆ" ಎಂದು ಹೇಳಿದರು.

ಸಂಘವು ಅಲ್ಪಸಂಖ್ಯಾತರಿಗೆ ಅಪಾಯ ಎನ್ನುವುದು ಕಟ್ಟುಕತೆ. ಇದು ಸಂಘದ ಅಥವಾ ಹಿಂದೂಗಳ ಸ್ವಭಾವವಲ್ಲ. ಸಹೋದರತ್ವ,  ಸೌಹಾರ್ದತೆ ಹಾಗೂ  ಶಾಂತಿಯ ಪರವಾಗಿ ನಿಲ್ಲಲು ಸಂಘ ನಿರ್ಧರಿಸುತ್ತದೆ ಎಂದು ಭಾಗವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News