ಭಾರತೀಯ ಸೇನೆಯ 'ಚೀತಾ' ಹೆಲಿಕಾಪ್ಟರ್‌ ಪತನ: ಪೈಲಟ್‌ ಮೃತ್ಯು

Update: 2022-10-05 10:24 GMT
Photo: Twitter/@ShivAroor

ಹೊಸದಿಲ್ಲಿ: ಭಾರತೀಯ ವಾಯುಸೇನೆಯ ಚೀತಾ ಹೆಲಿಕಾಪ್ಟರ್ ಇಂದು ಅರುಣಾಚಲ ಪ್ರದೇಶದ ತಾವಂಗ್ ಜಿಲ್ಲೆಯಲ್ಲಿ ಚೀನಾ ಜೊತೆಗಿನ ಗಡಿ ಸಮೀಪ ಪತನಗೊಂಡಿದ್ದು, ಹೆಲಿಕಾಪ್ಟರ್ ನ ಪೈಲಟ್ ಮೃತಪಟ್ಟಿದ್ದಾರೆ.

ಫಾರ್ವರ್ಡ್ ಪ್ರದೇಶದಲ್ಲಿ ನಿಯಮಿತ ಹಾರಾಟ ನಡೆಸುತ್ತಿರುವ ವೇಳೆ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಎ ಎಸ್ ವಾಲಿಯಾ ಹೇಳಿದ್ದಾರೆ.

ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್‍ಗಳಿದ್ದರು. ಹೆಲಿಕಾಪ್ಟರ್ ಪತನಗೊಂಡ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗಂಭೀರ ಗಾಯಗೊಂಡಿದ್ದ ಒಬ್ಬರು ಮೃತಪಟ್ಟರೆ ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News