ನೋಬೆಲ್ ಶಾಂತಿ ಪುರಸ್ಕಾರಕ್ಕಾಗಿ ಆಲ್ಟ್ ನ್ಯೂಸ್‍ನ ಪ್ರತೀಕ್ ಸಿನ್ಹಾ, ಮುಹಮ್ಮದ್ ಝುಬೈರ್ ಕಣದಲ್ಲಿ: TIMES ವರದಿ

Update: 2022-10-05 10:26 GMT
PC: Pratik Sinha

 ಹೊಸದಿಲ್ಲಿ : ಫ್ಯಾಕ್ಟ್ ಚೆಕರ್ಸ್ ಮತ್ತು ಆಲ್ಟ್  ನ್ಯೂಸ್ ಸಹಸ್ಥಾಪಕರಾಗಿರುವ ಪ್ರತೀಕ್ ಸಿನ್ಹಾ ಮತ್ತು ಮೊಹಮ್ಮದ್ ಝುಬೈರ್ ಅವರು 2022 ನೋಬಲ್ ಶಾಂತಿ ಪುರಸ್ಕಾರಕ್ಕಾಗಿ ಸ್ಪರ್ಧೆಯಲ್ಲಿರುವ ಹಲವರಲ್ಲಿ ಪ್ರಮುಖರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ TIMES ವರದಿ ಮಾಡಿದೆ.

ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ 343 ಅಭ್ಯರ್ಥಿಗಳಿದ್ದು ಅವರ ಪೈಕಿ 251 ವ್ಯಕ್ತಿಗಳು ಹಾಗೂ 92 ಸಂಘಟನೆಗಳಿವೆ.  ನೋಬೆಲ್ ಸಮಿತಿಯು ನಾಮನಿರ್ದೇಶನಗೊಂಡವರ ಹೆಸರುಗಳನ್ನು ಘೋಷಿಸುವುದಿಲ್ಲವಾದರೂ ರೂಟರ್ಸ್ ಸಮೀಕ್ಷೆಯೊಂದರ ಪ್ರಕಾರ ಬೆಲರೂಸಿಯಾದ ವಿಪಕ್ಷ ನಾಯಕಿ ಸ್ವಿಯಾಟ್ಲಾನಾ ತ್ಸಿಖನೌಸ್ಕಯ, ಡೇವಿಡ್ ಅಟೆನ್‍ಬರೋ, ಹವಾಮಾನ  ಹೋರಾಟಗಾರ್ತಿ ಗ್ರೆಟ್ಟಾ ಥನ್ಬರ್ಗ್, ಪೋಪ್ ಫ್ರಾನ್ಸಿಸ್, ತುವಾಲು ವಿದೇಶ ಸಚಿವ ಸೈಮನ್ ಕೊಫೆ ಮತ್ತು ಮ್ಯಾನ್ಮಾರ್ ನ್ಯಾಷನಲ್ ಯೂನಿಟಿ ಸರಕಾರವನ್ನು ನಾರ್ವೇಜಿಯಾದ ಸಂಸದರು ಸೂಚಿಸಿದ್ಧಾರೆ.

ಈ ಪ್ರಶಸ್ತಿಗಾಗಿ ಪ್ರತೀಕ್ ಸಿನ್ಹಾ ಮತ್ತು ಝುಬೈರ್ ಹೊರತಾಗಿ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್‌ ಮತ್ತು ಅವರ ಅಭಿಯಾನ ಕಾರವಾನ್-ಎ-ಮೊಹಬ್ಬತ್‌, ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ, ವಿಶ್ವ ಸಂಸ್ಥೆ ರಿಫ್ಯೂಜಿ ಏಜನ್ಸಿ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರ ವಿರೋಧಿ ಅಲೆಕ್ಸಿ ನವಾಲ್ನಿ ಅವರೂ ಕಣದಲ್ಲಿದ್ದಾರೆ.

ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರನ್ನು ಈ ವರ್ಷದ ಜೂನ್ ತಿಂಗಳಲ್ಲಿ ಅವರು 2018 ರಲ್ಲಿ ಮಾಡಿದ `ಪ್ರಚೋದನಾತ್ಮಕ' ಟ್ವೀಟ್ ಆಧರಿಸಿ ಬಂಧಿಸಲಾಗಿತ್ತು. ಬಂಧನಕ್ಕೊಳಗಾದ ಒಂದು ತಿಂಗಳ ನಂತರ ಅವರು ಸುಪ್ರೀಂ ಕೋರ್ಟ್ ಜಾಮೀನು ಪಡೆದು ಹೊರಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News