ಮುಂಬೈನ ರಿಲಾಯನ್ಸ್ ಆಸ್ಪತ್ರೆಗೆ ಬೆದರಿಕೆ ಕರೆ ಅಂಬಾನಿ ಕುಟುಂಬ ಸದಸ್ಯರಿಗೂ ಬೆದರಿಕೆ

Update: 2022-10-05 14:13 GMT

  ಮುಂಬೈ, ಅ.5: ನಗರದ ಸರ್ ಎಚ್.ಎನ್.ರಿಲಾಯನ್ಸ್ ಹಾಸ್ಪಿಟಲ್‌ಗೆ ಬುಧವಾರ ಅಜ್ಞಾತ ದೂರವಾಣಿ ಸಂಖ್ಯೆಯೊಂದರಿಂದ ಬೆದರಿಕೆ ಕರೆ ಬಂದಿದೆ. ಆಸ್ಪತ್ರೆಯನ್ನು ತಾನು ಸ್ಫೋಟಿಸುವುದಾಗಿ ಕರೆ ಮಾಡಿದ ವ್ಯಕ್ತಿಯು ಬೆದರಿಕೆಯೊಡ್ಡಿದ್ದಾನೆಂದು ಮೂಲಗಳು ತಿಳಿಸಿವೆ. ಅಂಬಾನಿ ಕುಟುಂಬದ ಕೆಲವು ಸದಸ್ಯರ ವಿರುದ್ಧವೂ ಬೆದರಿಕೆಯೊಡ್ಡಲಾಗಿದೆಯೆಂದು ಮೂಲಗಳುತಿಳಿಸಿವೆ.

    ಮಧ್ಯಾಹ್ನ 12:57ರ ವೇಳೆಗೆ ಆಸ್ಪತ್ರೆಯ ಸ್ಥಿರದೂರವಾಣಿ ಸಂಖ್ಯೆಗೆ ಬೆದರಿಕೆ ಕರೆ ಬಂದಿರುವುದಾಗಿ ಅವು ಹೇಳಿವೆ. ಬೆದರಿಕೆಯ ಬಳಿಕ ಡಿ.ಬಿ.ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ ಈ ವಿಷಯದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸಲಿದ್ದಾರೆ.

    ಈ ಮೊದಲು ಅಂಬಾನಿ ಕುಟುಂಬಕ್ಕೆ ಆಗಸ್ಟ್ 15ರಂದು ಎಚ್.ಎನ್.ರಿಲಾಯನ್ಸ್ ಆಸ್ಪತ್ರೆಯ ಸಹಾಯವಾಣಿಯಿಂದ ಬೆದರಿಕೆ ಕರೆ ಬಂದಿತ್ತು. ಆ ದೂರವಾಣಿ ಸಂಖ್ಯೆಗೆ ಆರೋಪಿಯು ಎಂಟು ಬಾರಿ ಕರೆ ಮಾಡಿದ್ದನು. ಆನಂತರ ಆತನನ್ನು ಪೊಲೀಸರು ದಹಿಸಾರ್‌ನಲ್ಲಿ ಪತ್ತೆ ಹಚ್ಚಿ, ಬಂಧಿಸಿದ್ದರು.

 ಇದೀಗ ಎಚ್.ಎನ್.ರಿಲಾಯನ್ಸ್ ಹಾಸ್ಪಿಟಲ್‌ಗೆ ಮತ್ತೆ ಬೆದರಿಕೆ ಕರೆ ಬಂದಿರುವುದನ್ನು ಮುಂಬೈ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಜ್ಞಾತ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿದಾತನು, ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದನು ಹಾಗೂ ಆಂಆನಿ ಕುಟುಂಬದ ಕೆಲವು ಸದಸ್ಯರಿಗೂ ಬೆದರಿಕೆ ಹಾಕಿದ್ದಾನೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News