ಮುಂದಿನ ವರ್ಷದಿಂದ ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ

Update: 2022-10-05 14:24 GMT

ಹೊಸದಿಲ್ಲಿ, ಅ.5: ಅಗ್ನಿವೀರ್ ಯೋಜನೆಯಡಿಯಲ್ಲಿ ಮುಂದಿನ ವರ್ಷದಿಂದ ವಾಯುಪಡೆಗೆ ಮಹಿಳಾ ಅಭ್ಯರ್ಥಿಗಳ ನೇಮಕಾತಿ ನಡೆಸಲು ಭಾರತೀಯ ವಾಯುಪಡೆ ನಿರ್ಧರಿಸಿದೆಯೆಂದು ಐಎಎಫ್‌ನ ವಾಯುಸೇನಾ ವರಿಷ್ಠ ಮಾರ್ಶಲ್ (ಎಸಿಎಂ) ವಿ.ಆರ್.ಚೌಧುರಿ ಮಂಗಳವಾರ ತಿಳಿಸಿದ್ದಾರೆ. ಅಕ್ಟೋಬರ್ 8ರಂದು ನಡೆಯಲಿರುವ ಭಾರತೀಯ ವಾಯುಪಡೆಯ 90ನೇ ಸಂಸ್ಥಾಪನಾ ದಿನಾಚರಣೆಯ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

      ನಾವು ಲಿಂಗತಾರತಮ್ಯರಹಿತ ಹಾಗೂ ಅರ್ಹತೆ ಮತ್ತು ಕಾರ್ಯನಿರ್ವಹಣೆಯೇ ಎಲ್ಲಕ್ಕಿಂತಲೂ ಮಿಗಿಲೆಂದು ಮಾನ್ಯ ಮಾಡುವ ಸಂಘಟನೆಯಾಗಿದ್ದೇವೆ. ಲಿಂಗಭೇದವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾದ ಅವಕಾಶವನ್ನು ಒದಗಿಸುವ ನಮ್ಮ ಬದ್ಧತೆಗೆ ಭಾರತೀಯ ವಾಯುಪಡೆಯಲ್ಲಿ ಮಹಿಳಾ ಅಧಿಕಾರಿಗಳ ಅತ್ಯಧಿಕ ಅನುಪಾತವೇ ಸಾಕ್ಷಿಯಾಗಿದೆಯೆಂದು ವಿ.ಆರ್. ಚೌಧುರಿ ಹೇಳಿದ್ದಾರೆ.

  ಮುಂದಿನ ವರ್ಷದಿಂದಮಹಿಳಾ ಆಗ್ನಿವೀರರನ್ನು ವಾಯುಪಡೆಗೆ ನಿಯೋಜಿಸುವ ಯೋಜನೆಯನ್ನು ರೂಪಿಸಲಾಗಿದ ಎಎಂದವರು ಹೇಳಿದರು. ಮುಂದಿನ ವರ್ಷ ಸುಮಾರು 3500 ಅಗ್ನಿವೀರರನ್ನು ಸೇರ್ಪಡೆಗೊಳಿಸುವ ಯೋಜನೆಯನ್ನು ವಾಯುಪಡೆ ಹೊಂದಿಎದ. ಈ ವರ್ಷದ ಡಿಸೆಂಬರ್‌ನಲ್ಲಿ ಒಟ್ಟು 3 ಸಾವಿರ ಪುರುಷ ಅಗ್ನಿವೀರರು ವಾಯುಪಡೆಗೆ ನೇಮಕಗೊಳ್ಳಲಿದ್ದಾರೆಂದು ಚೌಧರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News