ಮಲ್ಪೆ ಬಂದರಿನಲ್ಲಿ ಬಲೆಗೆ ಬಿದ್ದ ಬೃಹತ್ ಕಾರ್ಗಿಲ್ ಮೀನು

Update: 2022-10-05 15:05 GMT

ಮಲ್ಪೆ, ಅ.5: ಮಲ್ಪೆ ಬಂದರಿನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನ ಬಲೆಗೆ ಬೃಹತ್ ಗಾತ್ರದ ಕಾರ್ಗಿಲ್ ಮೀನು ಬಿದ್ದಿರುವ ಬಗ್ಗೆ ವರದಿಯಾಗಿದೆ.

ಯಕ್ಷೇಶ್ವರೀ ಕೃಪಾ ಆಳಸಮುದ್ರ ಬೋಟಿನಲ್ಲಿ ಮಂಗಳವಾರ ಮೀನು ಇಳಿಸುವಾಗ ಸುಮಾರು 2 ಕೆ.ಜಿ. ತೂಕದ ಕಾರ್ಗಿಲ್ ಮೀನು ದೊರಕಿದೆ.  ಸಾಮಾನ್ಯವಾಗಿ ಕಾರ್ಗಿಲ್ ಮೀನು ಹೆಚ್ಚೆಂದರೆ 250 ಗ್ರಾಂನ ತೂಗುತ್ತದೆ.  ಆದರೆ ಇಷ್ಟು ದೊಡ್ಡ ಮೀನು ಕಂಡು ಬರುವುದು ಬಲು ಅಪರೂಪ ಎಂದು ಮೀನುಗಾರ ಮಧುಚೇತನ್ ಕುಂದರ್ ತಿಳಿಸಿದ್ದಾರೆ.

ಈ ಮೀನಿನ ಸಾಮಾನ್ಯ ಹೆಸರು ರೆಡ್‌ಟೂತೆಡ್ ಟ್ರಿಗ್ಗರ್‌ಫಿಶ್, ಓಡೋನಸ್ ನಿಗರ್ ಇದರ ವೈಜ್ಞಾನಿಕ ಹೆಸರು. ಬಲಿಸ್ಟಿಡೆಗೆ ಸೇರಿದ ಈ ಮೀನು ಗಳಲ್ಲಿ ಸುಮಾರು 80 ಜಾತಿಗಳಿವೆ. ಇದು ಸೈನಿಕ ಸಮವಸ್ತ್ರ ಮಾದರಿಯ ಬಣ್ಣ ಹೊಂದಿರುವುದರಿಂದ ಕರ್ನಾಟಕ ಕರಾವಳಿಯಲ್ಲಿ ಇದನ್ನು ಕಾರ್ಗಿಲ್ ಎಂಬುದಾಗಿ ಕರೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News