×
Ad

ಮಲ್ಪೆ ಬೀಚ್‌ನಲ್ಲಿ ಮುಳುಗಿ ಮೈಸೂರಿನ ಯುವಕ ಮೃತ್ಯು

Update: 2022-10-05 20:39 IST

ಮಲ್ಪೆ, ಅ.5: ಅಲೆಗಳ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿ ಯುವಕನೋರ್ವ ಮೃತಪಟ್ಟ ಘಟನೆ ಮಲ್ಪೆ ಬೀಚ್‌ನಲ್ಲಿ ಮಂಗಳವಾರ ಸಂಜೆ ವೇಳೆ ನಡೆದಿದೆ.

ಮೃತರನ್ನು ಮೈಸೂರು ರಾಜೀವ್‌ ನಗರದ ಸಮೀವುಲ್ಲಾ ಶರೀಫ್ ಎಂಬವರ ಪುತ್ರ ಅಬ್ರಾರ್ ಅಹ್ಮದ್ ಶರೀಫ್ (28) ಎಂದು ಗುರುತಿಸಲಾಗಿದೆ.

ಸಮೀವುಲ್ಲಾ ತಮ್ಮ ಮನೆಯವರು ಮತ್ತು ಸಂಬಂಧಿಕರೊಂದಿಗೆ ಪ್ರವಾಸ ಹೊರಟು ಕಾಸರಗೋಡು, ಮಂಗಳೂರು ತೆರಳಿ ಸಂಜೆ ಮಲ್ಪೆ ಬೀಚಿಗೆ ಆಗಮಿಸಿದ್ದರು. ಅಲ್ಲಿ ಕುಟುಂಬದವರೆಲ್ಲ ಸಮುದ್ರದ ನೀರಿನಲ್ಲಿ ಆಡುತ್ತಿದ್ದರೆನ್ನಲಾಗಿದೆ.

ಈ ವೇಳೆ ಶರೀಫ್ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದರು. ಬಳಿಕ ಅಲೆಗಳೊಂದಿಗೆ ದಡಕ್ಕೆ ಬಂದವರನ್ನು ಉಪಚರಿಸಿ ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶರೀಫ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. 

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News