ಹಣ ಅಕ್ರಮ ವರ್ಗಾವಣೆ ಪ್ರಕರಣ: ಅನಿಲ್ ದೇಶಮುಖ್ ದೋಷಿಯಾಗುವ ಸಾಧ್ಯತೆ ಇಲ್ಲ

Update: 2022-10-05 18:01 GMT

ಮುಂಬೈ, ಅ. 5: ತನ್ನ ಮುಂದಿರುವ ಪುರಾವೆಗಳ ಆಧಾರದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು  ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೋಷಿಯಾಗುವ ಸಾಧ್ಯತೆ ಇಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯ ಅಭಿಪ್ರಾಯಿಸಿದೆ. 

ನ್ಯಾಯಮೂರ್ತಿ ಎನ್.ಜೆ. ಜಾಮ್ದಾರ್ ಅವರು ಅನಿಲ್ ದೇಶಮುಖ್ ಅವರಿಗೆ ಮಂಗಳವಾರ ಜಾಮೀನು ನೀಡಿದ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿದರು. 

ಜಾರಿ ನಿರ್ದೇಶನಾಲಯ ಆರಂಭದಲ್ಲಿ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರ ಹೇಳಿಕೆಯನ್ನು ಅವಲಂಬಿಸಿತು. ಪೊಲೀಸ್ ಪಡೆಯಲ್ಲಿ ಅವರ ಅಧಿಕಾರಾವಧಿ ವಿವಾದಾತ್ಮಕ ಎಂದು ಹೇಳಿತ್ತು ಎಂದು ನ್ಯಾಯಾಲಯ ಗಮನಿಸಿದೆ. 

ಈ ಹಿಂದೆ ವಾಝೆ ಅವರು ಸುಮಾರು 16 ವರ್ಷಗಳ ಕಾಲ ಅಮಾನತಿನಲ್ಲಿ ಇದ್ದರು. ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಹೊರಗೆ ಸ್ಫೋಟಕ ತುಂಬಿದ್ದ ಕಾರು ಇರಿಸಿದ್ದ ಆರೋಪದಲ್ಲಿ ಅವರು  ಬಂಧಿತರಾಗಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿತು. 
ಪ್ರಕರಣದಲ್ಲಿ ಪ್ರಸ್ತುತ ವಾಝೆ ಅವರು ಸಹ ಆರೋಪಿಯಾಗಿದ್ದಾರೆ. ಆದುದರಿಂದ ಈ ಹಂತದಲ್ಲಿ ಸಹ ಆರೋಪಿಯ ಹೇಳಿಕೆಯನ್ನು ಇನ್ನೊಬ್ಬರ ವಿರುದ್ಧ ಎಷ್ಟರ ಮಟ್ಟಿಗೆ ಬಳಸಬಹುದು ಎಂದು ನ್ಯಾಯಾಲಯ ಹೇಳಿದೆ. 
2021 ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಪೊಲೀಸ್ ಅಧಿಕಾರಿಗಳು ಬಾರ್ ಮಾಲಕರಿಂದ 1.17 ಕೋ.ರೂ. ಸಂಗ್ರಹಿಸಿದ್ದಾರೆ. ಅನಂತರ ಆ ಹಣವನ್ನು ದೇಶಮುಖ್ ಅವರ ಆಪ್ತ ಸಹಾಯಕ ಕುಂದನ್ ಶಿಂಧೆಗೆ ಹಸ್ತಾಂತರಿಸಿದ್ದಾರೆ ಎಂದು ವಾಝೆ ಆರೋಪಿಸಿದ್ದರು. 

ಆದರೆ ಈ ಹೇಳಿಕೆ ಮೇಲ್ನೋಟಕ್ಕೆ ವದಂತಿಯಂತೆ ಕಾಣುತ್ತದೆ. ಈ ಹೇಳಿಕೆಯಲ್ಲಿ ಮೂಲ, ಸಮಯ ಹಾಗೂ ಸ್ಥಳದ ಖಚಿತತೆಯ ಅಂಶಗಳ  ಕೊರತೆ ಇದೆ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News