'ಆದಿಪುರುಷ್‌' ಟೀಸರ್‌ ಬಗ್ಗೆ ಟ್ರೋಲ್: ನಿರ್ದೇಶಕ ಓಂ ರಾವತ್‌ ಪ್ರತಿಕ್ರಿಯೆ

Update: 2022-10-05 18:37 GMT
photo - twitter@omraut

ಹೊಸದಿಲ್ಲಿ: ಅಕ್ಟೋಬರ್ 2 ರಂದು ಅಯೋಧ್ಯೆಯಲ್ಲಿ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದ ʼಆದಿಪುರುಷʼ ಚಿತ್ರತಂಡವು ಸಾಮಾಜಿಕ ಮಾಧ್ಯಮದಲ್ಲಿ ಹಲವರಿಂದ ವ್ಯಾಪಕ ಟೀಕೆಯನ್ನು ಎದುರಿಸುತ್ತಿದೆ. 

ಚಿತ್ರತಂಡ ಬಿಡುಗಡೆ ಮಾಡಿದ ಟೀಸರ್‌ನ ವಿಎಫ್‌ಎಕ್ಸ್ ಅನ್ನು "ಕಳಪೆ" ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು ರಾವಣ, ಹನುಮಾನ್‌ ಪಾತ್ರದ ವಿನ್ಯಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಟೀಸರ್‌ನ ವಿಎಫ್‌ಎಕ್ಸ್‌ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಈ ನಡುವೆ, ಚಿತ್ರದ ಟೀಸರ್‌ ಗೆ ಬಂದಿರುವ ಪ್ರತಿಕ್ರಿಯೆಗಳ ಕುರಿತು ನಿರ್ದೇಶಕ ಓಂ ರಾವತ್‌ ಪ್ರತಿಕ್ರಿಯಿಸಿದ್ದು, “ಟೀಸರ್‌ ಕುರಿತು ಬಂದ ಪ್ರತಿಕ್ರಿಯೆಗಳು ನನಗೆ ಅಚ್ಚರಿಯಾಗಿಲ್ಲ” ಎಂದು ಹೇಳಿದ್ದಾರೆ. 

ಮುಂಬೈನಲ್ಲಿ ಟೀಸರ್‌ನ ವಿಶೇಷ 3D ಸ್ಕ್ರೀನಿಂಗ್ ಅನ್ನು ಏರ್ಪಡಿಸಿದ ಬಳಿಕ ಮಾಧ್ಯಮದೊಂದಿಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಚಲನಚಿತ್ರ ನಿರ್ದೇಶಕ ಓಂ ರಾವತ್,  “ಚಲನಚಿತ್ರವನ್ನು ದೊಡ್ಡ ಪರದೆಗಾಗಿ ನಿರ್ಮಿಸಲಾಗಿದೆ. ಮೊಬೈಲ್ ಫೋನ್‌ಗಳಿಗಾಗಿ ಅಲ್ಲ, ಹಾಗಾಗಿ ಟೀಸರ್‌ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳು ನನ್ನ ಅಚ್ಚರಿಗೆ ದೂಡಿಲ್ಲ” ಎಂದು ಹೇಳಿದ್ದಾರೆ. 
“ಚಿತ್ರದ ವಿಎಫ್‌ಎಕ್ಸ್ ಸೆಲ್‌ಫೋನ್‌ಗಳಲ್ಲಿ ಅಡಕವಾಗಲು ತುಂಬಾ ದೊಡ್ಡದಾಗಿದೆ,  ಚಿತ್ರದ ವಿಎಫ್‌ಎಕ್ಸ್ ದೊಡ್ಡ ಪರದೆಯಲ್ಲಿ ಅದ್ಭುತವಾಗಿ ಕಾಣುತ್ತದೆ” ಎಂದು ರಾವತ್‌ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

"ನಾನು ಖಚಿತವಾಗಿ ನಿರಾಶೆಗೊಂಡಿದ್ದೇನೆ, ಆಶ್ಚರ್ಯವೇನಿಲ್ಲ ಏಕೆಂದರೆ ಚಲನಚಿತ್ರವನ್ನು ದೊಡ್ಡ ಮಾಧ್ಯಮ, ದೊಡ್ಡ ಪರದೆಗಾಗಿ ನಿರ್ಮಿಸಲಾಗಿದೆ. ನೀವು ಅದನ್ನು ಮೊಬೈಲ್‌ಗಾಗಿ ಸ್ವಲ್ಪ ಮಟ್ಟಿಗೆ ಕುಗ್ಗಿಸಲು ಸಾಧ್ಯವಿಲ್ಲ. ನನಗೊಂದು ಆಯ್ಕೆ ನೀಡಿದ್ದರೆ, ನಾನು ಅದನ್ನು‌ (ಟೀಸರ್) ಎಂದಿಗೂ ಯೂಟ್ಯೂಬ್‌ನಲ್ಲಿ ಹಾಕುತ್ತಿರಲಿಲ್ಲ . ಆದರೆ ಅದು ಸಮಯದ ಅಗತ್ಯವಾಗಿದೆ. ನಾವು ಅದನ್ನು ಯೂಟ್ಯೂಬ್‌ ಅಲ್ಲಿ ಇರಿಸಬೇಕಾಗಿದೆ, ಆದ್ದರಿಂದಲೇ ಅದು ವ್ಯಾಪಕ ಪ್ರೇಕ್ಷಕರನ್ನು ತಲುಪುತ್ತದೆ." ಎಂದು ಓಂ ರಾವತ್‌ ಹೇಳಿದ್ದಾರೆ. 

ಎಲ್ಲಾ ವಯಸ್ಸಿನ ಜನರನ್ನು ಥಿಯೇಟರ್‌ಗಳಿಗೆ ಕರೆತರುವ ಉದ್ದೇಶವನ್ನು ತಮ್ಮ ಚಿತ್ರ ಹೊಂದಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News