ಆಸ್ಕರ್ಸ್‍ಗೆ ಎಲ್ಲಾ ಪ್ರಮುಖ ವಿಭಾಗಗಳಲ್ಲೂ ಅರ್ಜಿ ಸಲ್ಲಿಸಿದ ರಾಜಮೌಳಿಯ ಆರ್‌ಆರ್‌ಆರ್‌

Update: 2022-10-06 11:07 GMT

ಹೊಸದಿಲ್ಲಿ: ಮುಂದಿನ ವರ್ಷದ ಪ್ರತಿಷ್ಠಿತ ಆಸ್ಕರ್ಸ್(RRR) ಪ್ರಶಸ್ತಿಗಾಗಿ ಎಲ್ಲಾ ಪ್ರಮುಖ ವಿಭಾಗಗಳಲ್ಲೂ ತನ್ನ ಅರ್ಜಿಯನ್ನು ಖ್ಯಾತ ನಿರ್ದೇಶಕ ಎಸ್‍ಎಸ್ ರಾಜಮೌಳಿ( SS Rajamouli) ಅವರ 'ಆರ್‌ಆರ್‌ಆರ್‌' ಸಿನೆಮಾ ಸಲ್ಲಿಸಿದೆ. ಆರ್‌ಆರ್‌ಆರ್‌ನ ಅಧಿಕೃತ ಆಸ್ಕರ್ ಅಭಿಯಾನ ಕಳೆದ ಶುಕ್ರವಾರ ಲಾಸ್ ಏಂಜಲಿಸ್‍ನ ಚೈನೀಸ್ ಥಿಯೇಟರ್ ನಲ್ಲಿ ಬೃಹತ್ ಸ್ಕ್ರೀನಿಂಗ್ ಮೂಲಕ ಆರಂಭಗೊಂಡಿದೆ.

ಬೆಸ್ಟ್ ಪಿಕ್ಚರ್ (ಡಿವಿವಿ ದನಯ್ಯ), ಅತ್ಯುತ್ತಮ ನಿರ್ದೇಶಕ (ರಾಜಮೌಳಿ), ಅತ್ಯುತ್ತಮ ನಟ (ಜೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್), ಸ್ಕ್ರೀನ್‍ಪ್ಲೇ, ಮೂಲ ಹಾಡು, ಎಡಿಟಿಂಗ್, ಸಿನಿಛಾಯಾಗ್ರಹಣ, ಧ್ವನಿ, ಪ್ರೊಡಕ್ಷನ್ ಡಿಸೈನ್, ವಿಎಫ್‍ಎಕ್ಸ್ ಹೀಗೆ ವಿವಿಧ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆಲಿಯಾ ಭಟ್ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ಹಾಗೂ ಅಜಯ್ ದೇವಗನ್ ಅವರು ಅತ್ಯುತ್ತಮ ಸಹನಟ ವಿಭಾಗದಲ್ಲಿ ಹಾಗೂ 'ನಾಟು ನಾಟು' ಹಾಡನ್ನು ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಸಲ್ಲಿಸಲಾಗಿದೆ.

ಈ ಕುರಿತಂತೆ ಲಾಸ್ ಏಂಜಲಿಸ್ ಟೈಮ್ಸ್ ವರದಿಗಾರ ಜೆನ್ ಯಮಾತೋ ಟ್ವೀಟ್ ಕೂಡ ಮಾಡಿದ್ದಾರೆ.

'RRR' ಚಿತ್ರ ಬಾಕ್ಸಾಫೀಸ್‍ನಲ್ಲಿ ಯಶಸ್ಸು ಸಾಧಿಸಿರುವ ಹೊರತಾಗಿ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News