ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಂಧನ: 28.17 ಕೋ.ರೂ.ಗಳ ಏಳು ವಾಚ್‌ಗಳು ವಶಕ್ಕೆ

Update: 2022-10-06 16:24 GMT
photo: twitter.com/ndtv

 ಹೊಸದಿಲ್ಲಿ,ಅ.6: ಜಾಕೋಬ್ ಆ್ಯಂಡ್ ಕಂಪನಿಯ 27 ಕೋ.ರೂ.ಗೂ ಅಧಿಕ ವೌಲ್ಯದ ಅತ್ಯಂತ ದುಬಾರಿ ಚಿನ್ನ ಮತ್ತು ವಜ್ರಖಚಿತ ವಾಚ್ ಸೇರಿದಂತೆ ಏಳು ಕೈಗಡಿಯಾರಗಳ ಕಳ್ಳಸಾಗಾಣಿಕೆಗೆ ಯತ್ನಿಸಿದ್ದ ಪ್ರಯಾಣಿಕನೋರ್ವನನ್ನು ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವುದು ವರದಿಯಾಗಿದೆ.

ಭಾರತೀಯ ಪ್ರಜೆಯಾಗಿರುವ ಆರೋಪಿಯು ಅ.4ರಂದು ದುಬೈನಿಂದ ಎಮಿರೇಟ್ಸ್ ವಿಮಾನದ ಮೂಲಕ ದಿಲ್ಲಿಗೆ ಆಗಮಿಸಿದ್ದ. ಆತನ ಬಳಿಯಿಂದ ವಶಪಡಿಸಿಕೊಳ್ಳಲಾದ ಕೈಗಡಿಯಾರಗಳ ಒಟ್ಟು ವೌಲ್ಯ 28.17 ಕೋ.ರೂ.ಗಳೆಂದು ಕಸ್ಟಮ್ಸ್ ಇಲಾಖೆಯು ಅಂದಾಜಿಸಿದೆ.

ಕಸ್ಟಮ್ಸ್ ಕಾಯ್ದೆಯ ಕಲಂ 135ರಡಿ ಸುಂಕ ವಂಚನೆ ಯತ್ನದ ಆರೋಪದಲ್ಲಿ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸರಕುಗಳ ಮಾರುಕಟ್ಟೆ ವೌಲ್ಯ ಒಂದು ಕೋ.ರೂ.ಗಿಂತ ಹೆಚ್ಚಾಗಿದ್ದರೆ ಮತ್ತು ಆರೋಪ ಸಾಬೀತಾದರೆ ಆತ ಏಳು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News