ಮದ್ಯ ನೀತಿ ಪ್ರಕರಣ: ದಿಲ್ಲಿ, ಪಂಜಾಬ್, ಹೈದರಾಬಾದ್‌ನಾದ್ಯಂತ 35 ಸ್ಥಳಗಳಲ್ಲಿ ಈಡಿ ದಾಳಿ

Update: 2022-10-07 04:26 GMT
Photo:PTI

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ(ಈಡಿ) ಶುಕ್ರವಾರ ದಿಲ್ಲಿ, ಪಂಜಾಬ್ ಹಾಗೂ ಹೈದರಾಬಾದ್‌ನ 35 ಸ್ಥಳಗಳಲ್ಲಿ ಹೊಸ ದಾಳಿಗಳನ್ನು ಆರಂಭಿಸಿದೆ.  ಇದೀಗ ರದ್ದುಗೊಂಡಿರುವ ದಿಲ್ಲಿ ಮದ್ಯ ನೀತಿ ಜಾರಿಯಲ್ಲಿನ ಅಕ್ರಮಗಳ ಕುರಿತು ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ತೀವ್ರಗೊಳಿಸಿದೆ.

ಈ ರಾಜ್ಯಗಳಲ್ಲಿ ಮದ್ಯದ ಕಂಪನಿಗಳು, ವಿತರಕರು ಹಾಗೂ  ಪೂರೈಕೆ ಸರಪಳಿ ಜಾಲಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮುಂಜಾನೆಯಿಂದಲೇ ಶೋಧ ನಡೆಸಲಾಗುತ್ತಿದೆ.

ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದರು ಹಾಗೂ ಈ  ದಾಳಿಯನ್ನು "ಕೊಳಕು ರಾಜಕೀಯ" ಎಂದು ಬಣ್ಣಿಸಿದ್ದಾರೆ.

"500 ಕ್ಕೂ ಹೆಚ್ಚು ದಾಳಿಗಳು, 3 ತಿಂಗಳಿನಿಂದ 300 ಕ್ಕೂ ಹೆಚ್ಚು ಸಿಬಿಐ / ಈಡಿ ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ.  ಮನೀಶ್ ಸಿಸೋಡಿಯಾ ವಿರುದ್ಧ ಒಂದೇ ಒಂದು ಪುರಾವೆಗಳನ್ನು ಹುಡುಕಲು ಸಾಧ್ಯವಾಗಲಿಲ್ಲ. ಏಕೆಂದರೆ ಏನೂ ಅಕ್ರಮ ನಡೆದಿಲ್ಲ’’ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News