×
Ad

ಬಾಲಿವುಡ್ ನ ಹಿರಿಯ ನಟ ಅರುಣ್ ಬಾಲಿ ನಿಧನ

Update: 2022-10-07 10:12 IST
Photo:twitter

ಮುಂಬೈ: ಬಾಲಿವುಡ್ ನ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರ ಮನಗೆದ್ದಿರುವ ಹಿರಿಯ ನಟ ಅರುಣ್ ಬಾಲಿ Veteran actor Arun Bali  ಮುಂಬೈನಲ್ಲಿ 79 ನೇ ವಯಸ್ಸಿನಲ್ಲಿ ನಿಧನರಾದರು. ಕೆಲವು ಸಮಯದಿಂದ ಅರುಣ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಮುಂಬೈನ ಹಿರ್ನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅರುಣ್ ಬಾಲಿಗೆ ಅಮೆರಿಕದಲ್ಲಿ ನೆಲೆಸಿರುವ ಇಬ್ಬರು ಪುತ್ರಿಯರಿದ್ದಾರೆ. ಅವರು ನಾಳೆ ಅಕ್ಟೋಬರ್ 8 ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಪುತ್ರಿಯರ ಆಗಮನದ ನಂತರ ನಟನ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು.

ಅರುಣ್ ಬಾಲಿ ಅವರು 3 ಈಡಿಯಟ್ಸ್, ಕೇದಾರನಾಥ್, ಪಾಣಿಪತ್, ಹೇ ರಾಮ್, ದಂಡ್ ನಾಯಕ್, ರೆಡಿ, ಝಮೀನ್, ಪೋಲೀಸ್ ವಾಲಾ ಗುಂಡಾ, ಫೂಲ್ ಔರ್ ಅಂಗಾರ್ ಹಾಗೂ  ರಾಮ್ ಜಾನೆ ಸೇರಿದಂತೆ ಅನೇಕ ಇತರ ಸಿನೆಮಾಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

ಅವರು ಹಲವಾರು ಚಲನಚಿತ್ರಗಳು ಮತ್ತು ದೂರದರ್ಶನ ಧಾರವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 1991 ರ ಅವಧಿಯ ನಾಟಕ ಚಾಣಕ್ಯದಲ್ಲಿ ಕಿಂಗ್ ಪೋರಸ್ ಪಾತ್ರವನ್ನು, ದೂರದರ್ಶನದ ಧಾರವಾಹಿ ಸ್ವಾಭಿಮಾನ್‌ನಲ್ಲಿ ಕುನ್ವರ್ ಸಿಂಗ್ ಮತ್ತು ವಿವಾದಾತ್ಮಕ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 2000 ರ ಚಲನಚಿತ್ರ ಹೇ ರಾಮ್‌ನಲ್ಲಿ ಅವಿಭಜಿತ ಬಂಗಾಳದ ಮುಖ್ಯಮಂತ್ರಿ ಹುಸೇನ್ ಶಹೀದ್ ಸುಹ್ರವರ್ದಿ ಪಾತ್ರವನ್ನು ನಿರ್ವಹಿಸಿದ್ದರು. ಅರುಣ್ ಬಾಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕರೂ ಆಗಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News