×
Ad

ರತನ್ ಟಾಟಾ ಅವರಿಗೆ 'ಸೇವಾ ರತ್ನ' ಪ್ರಶಸ್ತಿ ನೀಡಿದ ಆರೆಸ್ಸೆಸ್ ಅಂಗಸಂಸ್ಥೆ ಸೇವಾ ಭಾರತಿ

Update: 2022-10-08 10:25 IST

ಹೊಸದಿಲ್ಲಿ, ಅ. 8: ಆರೆಸ್ಸೆಸ್ನ ಅಂಗ ಸಂಸ್ಥೆಯಾದ ಸೇವಾ ಭಾರತಿ ರತನ್ ಟಾಟಾ ಹಾಗೂ ಚಲಸ್ಸಾನಿ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಸಾಮಾಜಕ್ಕೆ ಸಲ್ಲಿಸಿದ ಸೇವೆಗಾಗಿ ಶುಕ್ರವಾರ ‘ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಇತರ 24 ಗಣ್ಯರು ಹಾಗೂ ಸಂಸ್ಥೆಗಳಿಗೆ ಕೂಡ ಸಂಸ್ಥೆ ಪ್ರಶಸ್ತಿ ನೀಡಿದೆ. ಕಾರ್ಯಕ್ರಮದಲ್ಲಿ ಉತ್ತರಾಖಂಡದ ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿದರು ಎಂದು ಹೇಳಿಕೆ ತಿಳಿಸಿದೆ.

‘‘ಸೇವೆಯ ಅರ್ಥವನ್ನು ಸೇವಾ ಭಾರತಿಯಿಂದ ಕಲಿಯಬಹುದು. ಇದು ನಿಸ್ವಾರ್ಥ ಸೇವೆಗೆ ಹೋಲಿಕೆಯಾಗಿದೆೆ’’ ಎಂದು ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರತನ್ ಟಾಟಾ ಅವರಿಗೆ ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಸಾಮಾಜಿಕ ಸೇವೆಗೆ ಬೆಲೆ ಕಟ್ಟಲಾಗದ ಕೊಡುಗೆ ನೀಡಿದ ಅಥವಾ ಸಾಮಾಜಿಕ ಅಭಿವೃದ್ಧಿಗೆ ಹಣಕಾಸಿನ ನೆರವು ಒದಗಿಸಿದ ಆಧಾರದ ಮೇಲೆ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ‘ಸೇವಾ ಭಾರತಿ’ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News