ಗುಜರಾತ್ ಕರಾವಳಿಯಲ್ಲಿ ಪಾಕಿಸ್ತಾನದ ಬೋಟ್‌ನಿಂದ 360 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
Update: 2022-10-08 12:27 IST
ಗಾಂಧಿನಗರ (ಗುಜರಾತ್), ಅ. 8: ರಾಜ್ಯದ ಕರಾವಳಿ ತೀರದಲ್ಲಿದ್ದ ಪಾಕಿಸ್ತಾನದ ದೋಣಿಯಿಂದ 350 ಕೋ.ರೂ. ಮೌಲ್ಯದ 50 ಕಿ.ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ತಟ ರಕ್ಷಣಾ ದಳ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಶನಿವಾರ ತಿಳಿಸಿದೆ.
ಅರಬಿ ಸಮುದ್ರದ ಗಡಿ ರೇಖೆಯ ಸಮೀಪದಿಂದ ‘ಅಲ್ ಸಕಾರ್’ ಹೆಸರಿನ ದೋಣಿಯಿಂದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, 6 ಮಂದಿ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೋಣಿಯನ್ನು ಜಖುವಾ ಬಂದರಿಗೆ ತರಲಾಗಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅದು ತಿಳಿಸಿದೆ. ಗುಜರಾತ್ನ ಕರವಾಳಿಯಲ್ಲಿ ಈ ವರ್ಷ ಮಾದಕ ದ್ರವ್ಯದೊಂದಿಗೆ ಒಟ್ಟು ನಾಲ್ಕು ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶುಕ್ರವಾರ ಮುಂಬೈ ಹಾಗೂ ಗುಜರಾತ್ನ ವಿವಿಧೆಡೆ ದಾಳಿ ನಡೆಸಿದ ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್ಸಿಬಿ)ದ ಅಧಿಕಾರಿಗಳು 120 ಕೋ.ರೂ. ವೌಲ್ಯದ 60 ಕಿ.ಗ್ರಾಂ ಮೆಫೆಡ್ರೋನ್ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು.