ಶಿವಸೇನೆಯ ಚಿಹ್ನೆಯನ್ನು ಸ್ಥಗಿತಗೊಳಿಸಿದ ಚುನಾವಣಾ ಆಯೋಗ
Update: 2022-10-08 21:41 IST
ಮುಂಬೈ: ಪಕ್ಷದೊಳಗಿನ ಎರಡು ಬಣಗಳ ನಡುವಿನ ಜಟಾಪಟಿ ನಡುವೆ ಇಂದು ಚುನಾವಣಾ ಆಯೋಗವು ಶಿವಸೇನೆ ಚಿಹ್ನೆಯನ್ನು ಸ್ಥಗಿತಗೊಳಿಸಿದೆ. ಆಡಳಿತಾರೂಢ ಏಕನಾಥ್ ಶಿಂಧೆ ಸರ್ಕಾರ ಅಥವಾ ಉದ್ಧವ್ ಠಾಕ್ರೆ ಬಣ ಈಗ 'ಬಿಲ್ಲು ಮತ್ತು ಬಾಣ' ಇರುವ ಚುನಾವಣಾ ಚಿಹ್ನೆಯನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ndtv.com ವರದಿ ಮಾಡಿದೆ.
ಠಾಕ್ರೆ ಬಣದಿಂದ "ನಿಜವಾದ" ಶಿವಸೇನೆ ಯಾರು ಎಂದು ನಿರ್ಧರಿಸಲು ಚುನಾವಣಾ ಆಯೋಗವನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.