ಅ.10ಕ್ಕೆ ಪಾಂಬೂರಿನಲ್ಲಿ ಸಮಗ್ರ ಕೃಷಿ ಮಾಹಿತಿ
Update: 2022-10-08 21:50 IST
ಉಡುಪಿ, ಅ.8: ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ರೋಟರಿ ಕ್ಲಬ್ ಶಿರ್ವ ಆಯೋಜಿಸಿರುವ ಸಮಗ್ರ ಕೃಷಿ ಪದ್ಧತಿ ಮಾಹಿತಿ ಕಾರ್ಯಕ್ರಮ ಅ.10ರ ಸೋಮವಾರ ಬೆಳಗ್ಗೆ 10 ಕ್ಕೆ ಪಾಂಬೂರು ಲೂಕಾಸ್ ಡಿಸೋಜರ ಮನೆ ವಠಾರ (ಪಡು ಪಂಜಿಮಾರು)ದಲ್ಲಿ ನಡೆಯಲಿದೆ.
ಶಿರ್ವ ಗ್ರಾಪಂ ಅಧ್ಯಕ್ಷ ರತನ್ ಶೆಟ್ಟಿ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೂಕಾಸ್ ಡಿಸೋಜಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರ್ವ ರೋಟರಿ ಅಧ್ಯಕ್ಷ ಪ್ರೊ. ವಿಠಲ ನಾಯಕ್, ಶಿರ್ವ ಗ್ರಾಪಂ ಸದಸ್ಯೆ ಗ್ರೇಸಿ ಕಾರ್ಡೋಜಾ, ರಾಜೇಶ್ ಶೆಟ್ಟಿ, ರಾಜೇಶ್ ಕುಲಾಲ್ ಮತ್ತು ಪ್ರಮೀಳ ಕುಲಾಲ್ ಭಾಗವಹಿಸಲಿ ದ್ದಾರೆ. ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.