×
Ad

ಬೌದ್ಧ ಧರ್ಮ ಮತಾಂತರ ಪ್ರಕರಣ: ಕೇಜ್ರಿವಾಲ್ ವಿರುದ್ಧ ಗುಜರಾತ್‌ನಲ್ಲಿ ‘ಹಿಂದೂ ವಿರೋಧಿ’ ಬ್ಯಾನರ್

Update: 2022-10-08 22:41 IST

ಹೊಸದಿಲ್ಲಿ, ಅ. 8: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ‘‘ಹಿಂದೂ ವಿರೋಧಿ’’ ಎಂದು ಕರೆದ ಹಾಗೂ ಅವರು ಮುಸ್ಲಿಮರ ಟೋಪಿ ಧರಿಸಿರುವ ಭಾವಚಿತ್ರ ಇರುವ ಬ್ಯಾನರ್‌ಗಳು ಗುಜರಾತ್‌ನ ಹಲವು ನಗರಗಳಲ್ಲಿ ಕಂಡು ಬಂದಿವೆ.

 ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬ್ಯಾನರ್‌ನಲ್ಲಿ ಕೇಜ್ರಿವಾಲ್ ಅವರ ಭಾವಚಿತ್ರದೊಂದಿಗೆ ‘‘ನಾನು ಹಿಂದೂ ಧರ್ಮವನ್ನು ಹುಚ್ಚುತನ ಎಂದು ಪರಿಗಣಿಸುತ್ತೇನೆ’’. ‘‘ನನಗೆ ಬ್ರಹ್ಮ, ವಿಷ್ಣು, ರಾಮ ಹಾಗೂ ಕೃಷ್ಣನಲ್ಲಿ ನಂಬಿಕೆ ಇಲ್ಲ’’ ಹಾಗೂ ‘‘ನಾನು ಶ್ರದ್ಧಾ ಪಿಂಡ ದಾನ ಅಥವಾ ಯಾವುದೇ ಹಿಂದೂ ಆಚರಣೆಯನ್ನು ಮಾಡಲಾರೆ’’ ಎಂಬ ಸಾಲುಗಳು ಕಂಡು ಬಂದಿವೆ. ಕೆಲವು ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ ದಿಲ್ಲಿಯ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ದಿಲ್ಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಪಾಲ್ಗೊಂಡಿರುವ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಆದ ದಿನದ ಬಳಿಕ ಅಹ್ಮದಾಬಾದ್, ರಾಜ್‌ಕೋಟ್, ಸೂರತ್ ಹಾಗೂ ವಡೋದರಾದಲ್ಲಿ ಈ ಬ್ಯಾನರ್‌ಗಳು ಕಂಡು ಬಂದಿವೆ.

ಈ ಕುರಿತು ಆಮ್ ಆದ್ಮಿ ಪಕ್ಷ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಗೌತಮ್, ಸಮಾನತೆಯ ಹಾಗೂ ದೇವರ ಬಗ್ಗೆ ನಂಬಿಕೆ ಇಲ್ಲದ ಪ್ರತಿಜ್ಞೆ ಸೇರಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರು ತೆಗೆದುಕೊಂಡ ಪ್ರತಿಜ್ಞೆಯನ್ನು ಮಾ್ರ ಪುನಾರಾವರ್ತಿಸಲಾಗಿದೆ ಎಂದಿದ್ದಾರೆ.ಗೌತಮ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಜನರು ಬುದ್ದಿ ಕಲಿಸಲಿದ್ದಾೆ ಎಂದು ಬಿಜೆಪಿ ಶುಕ್ರವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News