ಡಿಎಂಕೆ ಅಧ್ಯಕ್ಷರಾಗಿ ಎಂ.ಕೆ. ಸ್ಟಾಲಿನ್ 2ನೇ ಬಾರಿ ಅವಿರೋಧವಾಗಿ ಆಯ್ಕೆ
Update: 2022-10-09 10:53 IST
ಚೆನ್ನೈ,ಅ.9: ರವಿವಾರ ಚೆನ್ನೈನಲ್ಲಿ ನಡೆದ ಡಿಎಂಕೆ ಸಾಮಾನ್ಯ ಮಂಡಳಿ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಉನ್ನತ ಹುದ್ದೆಗೆ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ನಾಯಕರಾದ ದುರೈ ಮುರುಗನ್ ಮತ್ತು ಟಿ.ಆರ್.ಬಾಲು ಅವರು ಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೆ.ಎನ್.ನೆಹರು ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಡಿಎಂಕೆ ಮಹಿಳಾ ಘಟಕದ ಅಧ್ಯಕ್ಷೆ ಕನಿಮೋಳಿ ಕರುಣಾನಿಧಿ ಅವರನ್ನು ಉಪ ಪ್ರಧಾನ ಕಾರ್ಯದರ್ಶಿಯಾಗಿ ಪದೋನ್ನತಿಗೊಳಿಸಲಾಗಿದೆ. ಪೆರಿಯಸಾಮಿ,ಕೆ.ಪೊನ್ಮುಡಿ,ಎ.ರಾಜಾ ಮತ್ತು ಅಂತಿಯೂರ್ ಸೆಲ್ವರಾಜ್ ಅವರು ಇತರ ನಾಲ್ವರು ಉಪ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.