ವಿಟ್ಲ: ಮಿಲಾದುನ್ನಬಿ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

Update: 2022-10-09 07:29 GMT

ವಿಟ್ಲ; ವಿಶ್ವ ಪ್ರವಾದಿ ಮಹಮ್ಮದ್ (ಸ.ಅ)ರವರ ಜನ್ಮ ದಿನಾಚರಣೆಐನ್ನು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷ ರಾದ ಇಕ್ಬಾಲ್ ಶೀತಲ್ ಧ್ವಜಾರೋಹಣ ಮಾಡಿದರು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಸ್ಪರ್ಧೆಗಳು  ನಡೆದುವು.

ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಕುಂಞಿ, ಕಾರ್ಯದರ್ಶಿ ಹಮೀದ್ ಬದ್ರಿಯಾ, ಜತೆ ಕಾರ್ಯದರ್ಶಿ ಹಮೀದ್ ಕುರುಂಬಳ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಲೆಕ್ಕ ಪರಿಶೋಧಕರಾದ ಇಸ್ಮಾಯಿಲ್ ಪರ್ತಿಪ್ಪಾಡಿ, ವಿ.ಎ..ರಶೀದ್, ಸದಸ್ಯರಾದ ಹಮೀದ್ ಪೊನ್ನೋಟು, ವಿ.ಕೆ.ಎಂ. ಹಂಝ, ರಫೀಕ್ ಪೊನ್ನೋಟು, ಯೂಸೂಫ್ ಗಮಿ, ಅಶ್ರಫ್ ಕುಂಡಡ್ಕ, ಮಹಮ್ಮದ್ ಕಾಶಿಮಠ, ಅಬೂಬಕರ್ ಅನಿಲಕಟ್ಟೆ, ಮಹಮ್ಮದ್ ಗಮಿ ಹಾಗೂ ಮದರಸದ ಅಧ್ಯಾಪಕರು ಉಪಸ್ಥಿತರಿದ್ದರು.

ಬೊಬ್ಬೆಕೇರಿ ಮುನೀರುಲ್ ಇಸ್ಲಾಂ ಮದರಸ

ವಿಟ್ಲ: ಬೊಬ್ಬೆಕೇರಿ ಮುನೀರುಲ್ ಇಸ್ಲಾಂ ಮದರಸದಲ್ಲಿ ಮೀಲಾದ್  ಫೆಸ್ಟ್ ಕಾರ್ಯಕ್ರಮವು ಹಾಜಿ ಅಬ್ದುಲ್‌ ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದರ್ ಮುಅಲ್ಲಿಂ  ಹನೀಫ್ ಲತೀಫಿ ಕಾರ್ಯಕ್ರಮ ಉದ್ಘಾಟಿಸಿದರು

ವಿಟ್ಲ ಕೇಂದ್ರ ಜುಮಾ ಮಸೀದಿಯ  ಮುಖ್ಯ ಅತಿಥಿಗಳಾಗಿ ಖತೀಬ್  ಮಹಮ್ಮದ್ ನಸೀಹ್ ದಾರಿಮಿ, ಅಧ್ಯಕ್ಷ ಇಕ್ಬಾಲ್ ಶೀತಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ, ಸದಸ್ಯ ಮಹಮ್ಮದ್ ಗಮಿ,  ಕೋಶಾಧಿಕಾರಿ ಶರೀಫ್ ಪೊನ್ನೋಟು  ಶಮೀರ್ ಪಳಿಕೆ, ಬಶೀರ್ ಬೊಬ್ಬೆಕೇರಿ, ಝುಬೈರ್ ಮಾಸ್ಟರ್, ಜಲಾಲ್ ಬೊಬ್ಬೆಕೇರಿ, ಇಂತಿಯಾಝ್ ಅಹಮದ್, ಉಸ್ಮಾನ್ ಪಳಿಕೆ ,ಇಸ್ಮಾಯಿಲ್ ಪರ್ತಿಪ್ಪಾಡಿ ಮುಂತಾದವರು ವೇದಿಕೆಯಲ್ಲಿದ್ದರು.
ತೀರ್ಪುಗಾರರಾಗಿ ಅಬೂಬಕರ್ ಅನಿಲಕಟ್ಟೆ, ಇಂತಿಯಾಝ್, ರಿಫಾಝ್ ಅಲಿ ಸಹಕರಿಸಿದರು. ರಹಿಮಾನ್ ಬೊಬ್ಬೆಕೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News