×
Ad

ಕೇರಳ: ಬುರ್ಖಾ ಧರಿಸಿ ತಿರುಗಾಡುತ್ತಿದ್ದ ದೇವಸ್ಥಾನದ ಅರ್ಚಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Update: 2022-10-09 13:20 IST
photo: pti

ಕೋಯಿಕ್ಕೋಡ್: ಇಲ್ಲಿಗೆ ಸಮೀಪದ ಕೊಯಿಲಾಂಡಿಯಲ್ಲಿ ಬುರ್ಖಾ (burqa) ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೇವಸ್ಥಾನದ ಅರ್ಚಕನನ್ನು(Temple priest)  ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು PTI ವರದಿ ಮಾಡಿದೆ.

ಅಕ್ಟೋಬರ್ 7 ರಂದು ಕೊಯಿಲಾಂಡಿ ಜಂಕ್ಷನ್ ನಲ್ಲಿ ಜಿಷ್ಣು ನಂಬೂತಿರಿ (28 ವರ್ಷ) ಆಟೋ ಚಾಲಕರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

"ರಿಕ್ಷಾ ಚಾಲಕರು ಜಿಷ್ಣು  ಬುರ್ಖಾ ಧರಿಸಿ ಅಲೆದಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಯಾವುದೇ ಅಪರಾಧ ಎಸಗಿರುವ ಕುರಿತು ಆತನ ವಿರುದ್ಧ ದೂರು ಬಂದಿಲ್ಲ. ಆದ್ದರಿಂದ, ಅರ್ಚಕನ ಸಂಬಂಧಿಕರು ಪೊಲೀಸ್ ಠಾಣೆಗೆ ತಲುಪಿದ ನಂತರ ನಾವು ಅವನನ್ನು ಬಿಟ್ಟಿದ್ದೇವೆ" ಎಂದು ಪೊಲೀಸರು ಹೇಳಿದರು.

ಇಲ್ಲಿನ ಮೆಪ್ಪಯೂರು ಬಳಿಯ ದೇವಸ್ಥಾನವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ತನಗೆ ಚಿಕನ್ ಗುನ್ಯಾ ಇರುವ ಕಾರಣ ಬುರ್ಖಾ ಹಾಕಿಕೊಂಡಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಾಥಮಿಕ ಪರೀಕ್ಷೆಯಲ್ಲಿ ಚಿಕನ್ ಗುನ್ಯಾದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅರ್ಚಕನ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ಪರಿಶೀಲಿಸಿ, ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಮಕ್ಕಳು ಸೇರಿದಂತೆ ಐವರು ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News