×
Ad

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಕುಟುಂಬಕ್ಕೆ ಎರಡು ಅನಾಮಧೇಯ ಪತ್ರ

Update: 2022-10-09 14:40 IST
Photo:twitter

ಹಿಸಾರ್: ನಟಿ , ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ actor and BJP leader Sonali Phogat ಕುಟುಂಬ ಸದಸ್ಯರಿಗೆ  ಅನಾಮಧೇಯರಿಂದ ಎರಡು  ಪತ್ರಗಳು ಬಂದಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹೊಂದಿರುವ ಎರಡೂ ಪತ್ರಗಳನ್ನು ತನಿಖೆ ಮಾಡಬೇಕು ಎಂದು ಸೋನಾಲಿ ಫೋಗಟ್ ಅವರ ಸೋದರ ಮಾವ ಅಮನ್ ಪೂನಿಯಾ ಅವರು ಹೇಳಿದ್ದಾರೆ.

ಮೊದಲ ಪತ್ರದಲ್ಲಿ ಕೊಲೆ ಪ್ರಕರಣದಲ್ಲಿ  10 ಕೋಟಿ ರೂ. ಡೀಲ್ ನಡೆದಿದೆ ಎಂದು ಹೇಳಲಾಗಿದೆ.

ಇನ್ನೊಂದು ಪತ್ರದಲ್ಲಿ ರಾಜಕೀಯ ನಾಯಕರ ಹೆಸರನ್ನು ನಮೂದಿಸಲಾಗಿದೆ.

ಒಂದು ತಿಂಗಳ ಹಿಂದೆ ಒಂದು ಪತ್ರ ಬಂದಿದ್ದರೆ, ಇನ್ನೊಂದು ಪತ್ರ ಕೆಲವು ದಿನಗಳ ನಂತರ ಬಂದಿತ್ತು ಎಂದು ಅಮನ್ ಪೂನಿಯಾ ಹೇಳಿದ್ದಾರೆ.

ಸೋನಾಲಿ ಸಹೋದರಿ ರುಕೇಶ್ ಆದಂಪುರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಅಮನ್ ಪೂನಿಯಾ ಮಾಹಿತಿ ನೀಡಿದ್ದಾರೆ.

"ಸೋನಾಲಿ ಅವರ ಸಹೋದರಿ ರುಕೇಶ್ ಅವರು ಆದಂಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ನಮಗೆ ಆಮ್ ಆದ್ಮಿ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಅಮನ್ ಪೂನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News