ಗಾಯಗೊಂಡಿದ್ದ ವ್ಯಕ್ತಿಯ ಕಾಲಿಗೆ ರಟ್ಟಿನಿಂದ ಬ್ಯಾಂಡೇಜ್: ಮಧ್ಯಪ್ರದೇಶದಲ್ಲಿ ಮತ್ತೊಂದು ವೈದ್ಯಕೀಯ ನಿರ್ಲಕ್ಷ್ಯ

Update: 2022-10-09 11:45 GMT
Photo:NDTV

ಭಿಂಡ್: ಮಧ್ಯಪ್ರದೇಶದ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣವೊಂದರಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಯ ಕಾಲಿಗೆ ರಟ್ಟಿನಿಂದ ಬ್ಯಾಂಡೇಜ್ ಹಾಕಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಭಿಂಡ್ ಜಿಲ್ಲೆಯ ರೋನ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು.

ಆರೋಗ್ಯ ಕೇಂದ್ರದ ವೈದ್ಯರು ವ್ಯಕ್ತಿಯ ಮುರಿದುಹೋಗಿರುವ  ಕಾಲಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಬ್ಯಾಂಡೇಜ್ ರೂಪದಲ್ಲಿ ಕಾರ್ಡ್ ಬೋರ್ಡ್ ಅನ್ನು ಬಳಸಿದ್ದರು. ನಂತರ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ಡ್ರೆಸ್ಸಿಂಗ್ ಬದಲಾಯಿಸಲು ಆರಂಭಿಸಿದಾಗ ವ್ಯಕ್ತಿಯ ಕಾಲಿಗೆ ಕಾರ್ಡ್‌ಬೋರ್ಡ್ ಕಟ್ಟಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

 ಮುರಿತದ ಅಂಗವನ್ನು ಬ್ಯಾಂಡೇಜ್ ಮಾಡಲು ಬಳಸುವ "ಪ್ಲಾಸ್ಟರ್ ಆಫ್ ಪ್ಯಾರಿಸ್" ವಸ್ತುವು ಆರೋಗ್ಯ ಕೇಂದ್ರದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ವೈದ್ಯರು ರಟ್ಟನ್ನು ಬಳಸಿದ್ದಾರೆ ಎಂದು ಜಿಲ್ಲಾಅಧಿಕಾರಿಯೊಬ್ಬರು ತಿಳಿಸಿದರು.

"ಕಾರ್ಡ್‌ಬೋರ್ಡ್ ಬಳಸಿರುವುದರಲ್ಲಿ ತಪ್ಪೇನಿಲ್ಲ.  ಏಕೆಂದರೆ ಮುರಿತದ ಕಾಲಿಗೆ ಆಸರೆ ನೀಡಿ ಮೊದಲು ರಕ್ತಸ್ರಾವವನ್ನು ನಿಲ್ಲಿಸುವುದು ಸಿಬ್ಬಂದಿಯ ಮುಖ್ಯ ಉದ್ದೇಶವಾಗಿತ್ತು. ಗಾಯದ ತೀವ್ರತೆಯಿಂದಾಗಿ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ'' ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News