ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ: ನಾಲ್ಕು ಪ್ರಶಸ್ತಿ ಬಾಚಿಕೊಂಡ ಮಂಸೋರೆ ನಿರ್ದೇಶನದ 'ಆ್ಯಕ್ಟ್ 1978' ಚಿತ್ರ

Update: 2022-10-10 07:25 GMT
Photo credit: Facebook/Manso Re

ಬೆಂಗಳೂರು: 67ನೇ ಫಿಲ್ಮ್ ಫೇರ್ (Filmfare) ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಬೆಂಗಳೂರಿನಲ್ಲಿ ನಡೆದಿದ್ದು, ಕನ್ನಡದಲ್ಲಿ ಮಂಸೋರೆ (Mansore) ನಿರ್ದೇಶನದ 'ಆ್ಯಕ್ಟ್ 1978' ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಧನಂಜಯ್ ಅತ್ಯುತ್ತಮ ನಟ, ಯಜ್ಞಾ ಶೆಟ್ಟಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವರ್ಣರಂಜಿತ ಸಮಾರಂಭದಲ್ಲಿ 2020- 2021ನೇ ಸಾಲಿನಲ್ಲಿ ಬಿಡುಗಡೆಯಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನೆಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

'ಆ್ಯಕ್ಟ್ 1978' ಕನ್ನಡ ಚಲನಚಿತ್ರವು ಅತ್ಯುತ್ತಮ ಸಿನೆಮಾ, ಅತ್ಯುತ್ತಮ ನಟಿ (ಯಜ್ಞಾ ಶೆಟ್ಟಿ), ಅತ್ಯುತ್ತಮ ಪೋಷಕ ನಟ (ಬಿ.ಸುರೇಶ್) ಮತ್ತು ಅತ್ಯುತ್ತಮ ಗೀತ ಸಾಹಿತ್ಯ (ಜಯಂತ್ ಕಾಯ್ಕಿಣಿ) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. 

'ಬಡವ ರಾಸ್ಕಲ್' ಸಿನೆಮಾದ ನಟನೆಗಾಗಿ ಧನಂಜಯ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದರೆ, ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಿಸಲಾಯಿತು. ರಾಜ್ ಬಿ. ಶೆಟ್ಟಿಯವರಿಗೆ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶನ’ ಪ್ರಶಸ್ತಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News