ಹೊಸ ಚಿತ್ರಕ್ಕಾಗಿ ಬಾಹ್ಯಾಕಾಶದಲ್ಲಿ ಸ್ಪೇಸ್ ವಾಕ್ ಮಾಡಲಿರುವ ಟಾಮ್ ಕ್ರೂಸ್?

Update: 2022-10-10 12:56 GMT
ಟಾಮ್ ಕ್ರೂಸ್ (Photo: Twitter/@TomCruise)

ನ್ಯೂಯಾರ್ಕ್: ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ (Tom Cruise) ಅವರು ಬಾಹ್ಯಾಕಾಶದಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಪ್ರಥಮ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಬೇಕೆಂಬ ತವಕದಲ್ಲಿದ್ದಾರೆ. ಅದಕ್ಕಾಗಿ ಸಿದ್ಧತೆಗಳೂ ನಡೆದಿವೆ. ನಿರ್ದೇಶಕ ಡೌಗ್ ಲಿಮಾನ್ ಜೊತೆಗೆ ಅವರು ಇದಕ್ಕಾಗಿ ಒಪ್ಪಂದಕ್ಕೆ ಬಂದಿದ್ದಾರೆನ್ನಲಾಗಿದ್ದು ಈ ಚಿತ್ರಕ್ಕಾಗಿ ಅವರು ಸ್ಪೇಸ್‍ವಾಕ್ (Spacewalk) ಮಾಡಲಿದ್ದಾರೆಂದು ವರದಿಯಾಗಿದೆ.

ಟಾಮ್ ಕ್ರೂಸ್ ಮತ್ತು ಲಿಮನ್ ಇಬ್ಬರೂ ಈ ಹೊಸ ಚಿತ್ರದ ಪ್ರಸ್ತಾವನೆಯೊಂದಿಗೆ ಯುನಿವರ್ಸಲ್ ಫಿಲ್ಮ್ಡ್ ಎಂಟರ್‍ಟೈನ್ಮೆಂಟ್ ಗ್ರೂಪ್ ಅನ್ನು ಸಂಪರ್ಕಿಸಿದ್ದಾರೆ. ಈ ಹಿಂದೆಯೇ ಟಾಮ್ ಕ್ರೂಸ್ ಇಂತಹ ಒಂದು ಬಯಕೆ ಹೊಂದಿದ್ದರೂ ಕೋವಿಡ್ ಸಾಂಕ್ರಾಮಿಕ ಅದಕ್ಕೆ ಅಡ್ಡಿಯಾಗಿತ್ತು. ಟಾಮ್ ಕ್ರೂಸ್ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಲ್ಲಿ ಚಿತ್ರೀಕರಣ ನಡೆಸುವುದು ತಮ್ಮ ಸ್ಟೂಡಿಯೋದ ಮಹತ್ವಾಕಾಂಕ್ಷೆಗಳಲ್ಲೊಂದಾಗಿದೆ ಎಂದು ಯುನಿವರ್ಸಲ್ ಸ್ಟುಡಿಯೋಸ್ ಅಧ್ಯಕ್ಷೆ ಡೇಮ್ ಡೊನ್ನಾ ಲ್ಯಾಂಗ್ಲೇ ಹೇಳಿದ್ದಾರೆ.

ಈ ಚಿತ್ರದ ಕಥಾಹಂದರ ಭೂಮಿಯಲ್ಲಿಯೇ ಇರಲಿದೆಯಾದರೂ ಅದಲ್ಲಿ ನಾಯಕ ನಟ ಬಾಹ್ಯಾಕಾಶಕ್ಕೆ ತೆರಳಿ ಜಗತ್ತನ್ನು ಉಳಿಸಬೇಕಿದೆ ಎಂದು ಅವರು ಹೇಳಿದರು.

ಸ್ಪೇಸ್‍ವಾಕ್ ಮಾಡಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಹೊರಗಿನ ಮೊದಲ ವ್ಯಕ್ತಿ ಟಾಮ್ ಕ್ರೂಸ್ ಆಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News