ದುರ್ಗಾ ವಿಗ್ರಹದ ಫೋಟೋ ಕ್ಲಿಕ್ಕಿಸಿದಕ್ಕೆ ಐವರು ಆದಿವಾಸಿ ಯುವಕರ ಮೇಲೆ ಹಲ್ಲೆ: ದೂರು

Update: 2022-10-10 18:24 GMT
ಸಾಂದರ್ಭಿಕ ಚಿತ್ರ (PTI)

ರಾಂಚಿ: ಜಾರ್ಖಂಡ್ ಗ್ರಾಮದಲ್ಲಿ ದುರ್ಗಾ ವಿಗ್ರಹದ (Durga idol) ಫೋಟೋ ಕ್ಲಿಕ್ಕಿಸಿದಕ್ಕಾಗಿ (photographing) ಆದಿವಾಸಿಗಳಿಗೆ (Tribals) ಥಳಿಸಲಾಗಿದೆ ಎಂದು ಪೊಲೀಸರು (police) ತಿಳಿಸಿದ್ದಾರೆ. ಫೋಟೋ ತೆಗೆದ ಯುವಕನ ತಲೆ ಬೋಳಿಸಿ ಅವಮಾನಿಸಲಾಗಿದೆ ಎಂದೂ ವರದಿಯಾಗಿದೆ.

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ದುರ್ಗಾ ವಿಗ್ರಹದ ಫೋಟೋ ತೆಗೆದ ವ್ಯಕ್ತಿ ಸೇರಿದಂತೆ ಐವರು ಆದಿವಾಸಿಗಳನ್ನು ಗ್ರಾಮದ ಮುಖ್ಯಸ್ಥರು ಮತ್ತು ಅವರ ಹಿಂಬಾಲಕರು ಥಳಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಅಕ್ಟೋಬರ್ 6 ರಂದು ರಾಜ್ಯದ ರಾಜಧಾನಿ ರಾಂಚಿಯಿಂದ 210 ಕಿಮೀ ದೂರದಲ್ಲಿರುವ ಪಾಲ್ಹೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧಿಸಿದಂತೆ ಬೀಟಾ ಪಂಚಾಯತ್‌ನ 'ಮುಖಿಯಾ' ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

“ಸಂತ್ರಸ್ತರು ಬೇಟಾ ಪಂಚಾಯತ್‌ನ ಮುಖಿಯಾದ ರಾಮೇಶ್ವರ್ ಸಿಂಗ್ ಮತ್ತು ಇತರ ಏಳು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಚಿನಿಯಾ ಪೊಲೀಸ್ ಠಾಣೆಯ ಪ್ರಭಾರಿ ಬೀರೇಂದ್ರ ಹನ್ಸ್ಡಾ ಹೇಳಿದ್ದಾರೆ.  

“ನಾನು ದುರ್ಗಾ ಮೂರ್ತಿಯ ಚಿತ್ರ ತೆಗೆಯುತ್ತಿದ್ದಾಗ, ನಾನು ಕೊರವ ಜಾತಿಗೆ ಸೇರಿದವನು ಎಂದು ಹೇಳಿ ಕೆಲವರು ನನ್ನನ್ನು ಪೂಜಾ ಮಂಟಪದಿಂದ ಹೊರಹಾಕಿದರು. ನಂತರ ಅದೇ ಗ್ರಾಮದ ಗಂಗಾ ಕೊರ್ವಾ, ರೂಪೇಶ್ ಕೊರ್ವಾ, ಗಂಗಾ ಕೊರ್ವಾ ಮತ್ತು ಅಜಯ್ ಕೊರ್ವಾ ನನ್ನ ರಕ್ಷಣೆಗೆ ಬಂದರು. ಆದರೆ ಅವರನ್ನು ಕೂಡಾ ನಿಂದಿಸಿ ಥಳಿಸಲಾಗಿದೆ" ಎಂದು ವಿನೋದ್ ಕೊರ್ವಾ ಆರೋಪಿಸಿದ್ದಾರೆ.

ಮರುದಿನ ‘ಮುಖಿಯಾ’ ಮತ್ತು ಇತರ ಮೂವರು ಜನರು ಸಂಧಾನದ ನೆಪದಲ್ಲಿ ಐವರನ್ನೂ ಕರೆದರು. ನಂತರ, ನಮ್ಮನ್ನು ಹಗ್ಗದಿಂದ ಕಟ್ಟಿ ಥಳಿಸಲಾಗಿದೆ ಎಂದು ವಿನೋದ್ ಹೇಳಿದ್ದಾರೆ.

ಇದನ್ನೂ ಓದಿ: ಐದು ಸಹಕಾರ ಸಂಘಗಳ ಜೊತೆ ಅಮುಲ್ ವಿಲೀನ: ಅಮಿತ್ ಶಾ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News