ಬಂದೂಕು ತೋರಿಸಿ ಮಹಿಳೆ ಮೇಲೆ ಅತ್ಯಾಚಾರ

Update: 2022-10-11 02:17 GMT

ಗಾಝಿಯಾಬಾದ್: ಇಲ್ಲಿನ ಮುರದ್‍ ನಗರ ಪ್ರದೇಶದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಬಂದೂಕು ತೋರಿಸಿ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಬ್ಯೂಟಿಪಾರ್ಲರ್ ಪ್ರಚಾರಕ್ಕಾಗಿ ವಿತರಿಸಿದ್ದ ಕರಪತ್ರದಲ್ಲಿ ಪ್ರಕಟಿಸಿದ್ದ ಸಂಪರ್ಕ ಸಂಖ್ಯೆ ಹಾಗೂ ವಿಳಾಸದ ಆಧಾರದಲ್ಲಿ ಸಂಪರ್ಕ ಸಾಧಿಸಿದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದೆ.

ಅರೋಪಿ ಮೀರಠ್ ನಗರದ ಲಿಸಾದಿ ಗೇಟ್ ಪ್ರದೇಶದವನಾಗಿದ್ದು, ಕರಪತ್ರದಲ್ಲಿ ನೀಡಲಾದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ, ಪಾರ್ಲರ್‍ಗೆ ಗಿರಾಕಿಗಳನ್ನು ಕಳುಹಿಸಲು ಆರಂಭಿಸಿದ್ದ ಎಂದು ಠಾಣಾಧಿಕಾರಿ ಸತೀಶ್ ಕುಮಾರ್ ಹೇಳಿದ್ದಾರೆ.

ಒಂದು ದಿನ ಮಹಿಳೆಯೊಬ್ಬರೇ ಪಾರ್ಲರ್‍ನಲ್ಲಿ ಇದ್ದ ವೇಳೆ ಆಗಮಿಸಿದ ಆರೋಪಿ, ಬಂದೂಕು ತೋರಿಸಿ ಅತ್ಯಾಚಾರ ಎಸಗಿದ. ಈ ಘಟನೆಯ ವೀಡಿಯೊ ಕೂಡಾ ಚಿತ್ರೀಕರಿಸಿದ ಆತ ಇದನ್ನು ಬಹಿರಂಗಪಡಿಸಿದರೆ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆಘಾತಕ್ಕೆ ಒಳಗಾದ ಮಹಿಳೆ ತನ್ನ ಪತಿಯ ಬಳಿ ಘಟನೆ ಬಗ್ಗೆ ಹೇಳಿಕೊಂಡಿದ್ದು, ರವಿವಾರ ಈ ಸಂಬಂಧ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News