×
Ad

ಸಾಮಾಜಿಕ ಹೋರಾಟಗಾರ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣ: ಮಹಾರಾಷ್ಟ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ತರಾಟೆ

Update: 2022-10-12 13:40 IST
Photo:PTI

ಮುಂಬೈ: ಸಾಮಾಜಿಕ ಹೋರಾಟಗಾರ ಹಾಗೂ  ಸಿಪಿಐ ನಾಯಕ ಗೋವಿಂದ್ ಪನ್ಸಾರೆ activist and CPI leader Govind Pansare ಅವರ ಸಾವಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ವೀರೇಂದ್ರಸಿನ್ಹ್ ತಾವಡೆಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ 2018 ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದುವರಿಸುವಲ್ಲಿ ಕಾನೂನು ಪ್ರಕ್ರಿಯೆ ಕೊರತೆಗಾಗಿ ಮಹಾರಾಷ್ಟ್ರ ಸರಕಾರವನ್ನು ಎಂದು ಬಾಂಬೆ ಹೈಕೋರ್ಟ್ Bombay High Court  ಮಂಗಳವಾರ ತರಾಟೆಗೆ ತೆಗೆದುಕೊಂಡಿತು. .

ಫೆಬ್ರವರಿ 16, 2015 ರಂದು ಕೊಲ್ಲಾಪುರದ ಅವರ ಮನೆಯ ಬಳಿ ಪನ್ಸಾರೆ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರು ನಾಲ್ಕು ದಿನಗಳ ನಂತರ ನಿಧನರಾದರು. 2013ರಲ್ಲಿ ನಡೆದ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲೂ ತಾವಡೆ ಆರೋಪಿಯಾಗಿದ್ದಾನೆ.

ಜನವರಿ 2018 ರಲ್ಲಿ ಕೊಲ್ಲಾಪುರದ ಸೆಷನ್ಸ್ ನ್ಯಾಯಾಲಯವು ಕಮ್ಯುನಿಸ್ಟ್ ನಾಯಕನ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಂಕಿತ ತಾವಡೆಗೆ ಜಾಮೀನು ನೀಡಿತ್ತು, ಪ್ರಕರಣದ ವಿಚಾರಣೆಯು ಇನ್ನೂ ಆರಂಭವಾಗಿಲ್ಲ ಎಂದು ಹೇಳಿತ್ತು. ಇದರಿಂದ ನೊಂದ ರಾಜ್ಯ ಸರಕಾರ ಜಾಮೀನು ರದ್ದು ಕೋರಿ ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿತ್ತು

ರಾಜ್ಯ ಸರ್ಕಾರದ ವಕೀಲರಾದ ಎಸ್. ಆರ್. ಅಗರ್ಕರ್ ಅವರು 2018 ರಲ್ಲಿ ಸಲ್ಲಿಸಿದ ಮನವಿಯ ವಿಚಾರಣೆ ಮುಂದೂಡುವಂತೆ ಮಂಗಳವಾರ ಕೋರಿದರು. ಇದಕ್ಕೆ ನ್ಯಾಯಮೂರ್ತಿ ಸಾರಂಗ್ ವಿ. ಕೊತ್ವಾಲ್ ಅವರ ಏಕಸದಸ್ಯ ಪೀಠವು  ಅಸಮಾಧಾನ ವ್ಯಕ್ತಪಡಿಸಿತು. ಜಾಮೀನು ರದ್ದುಗೊಳಿಸುವುದಾದರೆ ಪ್ರಾಸಿಕ್ಯೂಷನ್ ಮೂಲಕ ತುರ್ತು ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಧೀಶರು ಮೌಖಿಕವಾಗಿ ಹೇಳಿದರು.

ಆದಾಗ್ಯೂ, "ಕೊನೆಯ ಅವಕಾಶ" ಎಂಬಂತೆ ಪೀಠವು ಪ್ರಕರಣವನ್ನು ಮುಂದೂಡಲು ಅವಕಾಶ ಮಾಡಿಕೊಟ್ಟಿತು ಹಾಗೂ  ಮುಂದಿನ ವಿಚಾರಣೆಯನ್ನು ನವೆಂಬರ್ 22 ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News