×
Ad

ಯುವ ಮೆರಿಡಿಯನ್ ಗ್ರೂಪ್ಸ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2022-10-13 21:26 IST

ಕುಂದಾಪುರ, ಅ.13: ಕೋಟೇಶ್ವರದಲ್ಲಿನ ಯುವ ಮೆರಿಡಿಯನ್ ಗ್ರೂಪ್ಸ್‌ನ ಸೇವೆ, ಸಾಧನೆಗೆ ಪ್ರತಿಷ್ಠಿತ ದಿ ಟೈಮ್ಸ್ ಗ್ರೂಪ್ ಎಕ್ಸಲೆನ್ಸಿ ಇನ್ ಲಕ್ಷುರಿ ಎಂಡ್ ಲೈಸುರ್ ಸ್ಟೇಗಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಯುವ ಮೆರಿಡಿಯನ್ ಸಂಸ್ಥೆಯ ಆಡಳಿತ ಪಾಲುದಾರ ಬಿ. ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಯುವ ಮೆರಿಡಿಯನ್ ಸಂಸ್ಥೆಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಅದೇ ರೀತಿ ನಿಟ್ಟೆ-ಕೆಬಿಎಲ್ ಎಂಎಸ್‌ಎೂಂಇ ಬ್ಯುಸಿನೆಸ್ ಎಕ್ಸಲೆನ್ಸಿ ಅವಾರ್ಡ್- 2022 ಲಭಿಸಿದೆ. ಬೆಸ್ಟ್ ಇನೋವೇಟಿವ್ ಎಂಟರ್ಪ್ರೈಸಸ್ ಅವಾರ್ಡ್‌ನ್ನು ಎಐಸಿ ನಿಟ್ಟೆ ಹಾಗೂ ಕರ್ಣಾಟಕ ಬ್ಯಾಂಕ್ ಜಂಟಿಯಾಗಿ ಪ್ರದಾನ ಮಾಡಿದೆ ಎಂದರು.

ಯುವ ಮೆರಿಡಿಯನ್ ಸ್ಫಾ ವಿಭಾಗವು ನೀಡುತ್ತಿರುವ ಸೇವೆಯಿಂದಾಗಿ ಅಂತರಾಷ್ಟ್ರೀಯ ಮನ್ನಣೆ, ಗೌರವಕ್ಕೆ ಪಾತ್ರವಾಗಿದ್ದಲ್ಲದೆ ರಾಜ್ಯದ ಪ್ರತಿಷ್ಠಿತ ಮುಂಚೂಣಿಯ ಹೋಟೆಲ್ಗದಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಪ್ರವಾ ಸೋದ್ಯಮಕ್ಕೆ ನೀಡುತ್ತಿರುವ ಉತ್ತಮ ಸಹಕಾರಕ್ಕಾಗಿ ಯುವ ಮೆರಿಡಿಯನ್ ಗ್ರೂಪ್ ಸತತ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗುತ್ತಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಯುವ ಮೆರಿಡಿಯನ್ ಸಮೂಹ ಸಂಸ್ಥೆಯ ಆಡಳಿತ ಪಾಲುದಾರ ವಿನಯ ಕುಮಾರ್ ಶೆಟ್ಟಿ, ಜನರಲ್ ಮ್ಯಾನೇಜರ್ ಶರತ್ ದಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News