×
Ad

ನಾನು ಭಾರತೀಯ ಮುಸ್ಲಿಂ,ಚೀನಿ ಮುಸ್ಲಿಂ ಅಲ್ಲ : ಕೇಂದ್ರ ಸರಕಾರವನ್ನು ತಿವಿದ ಫಾರೂಕ್ ಅಬ್ದುಲ್ಲಾ

Update: 2022-10-13 22:40 IST

ಮುಂಬೈ,ಅ.13: ದೇಶದಲ್ಲಿ ಮುಸ್ಲಿಮರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಗುರುವಾರ ಆರೋಪಿಸಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾವು ನಿಮ್ಮಂದಿಗಿದ್ದೇವೆ. ನಾವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶವನ್ನು ಒಂದಾಗಿ ಇಟ್ಟುಕೊಳ್ಳಬೇಕಿದೆ. ನಾನು ಮುಸ್ಲಿಂ. ಆದರೆ ಭಾರತೀಯ ಮುಸ್ಲಿಂ,ಚೀನಿ ಮುಸ್ಲಿಂ ಅಲ್ಲ’ ಎಂದು ಹಿರಿಯ ಎನ್‌ಸಿಪಿ (NCP) ನಾಯಕ ಛಗನ್ ಭುಜಬಲ್ (Chagan Bhujabal) ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಪಕ್ಷವು ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಬ್ದುಲ್ಲಾ ಹೇಳಿದರು.

ಶಿವಸೇನೆ ನಾಯಕ ಉದ್ಧವ ಠಾಕ್ರೆ(Uddhav Thackeray),ಕವಿ ಜಾವೇದ್ ಅಖ್ತರ್(Poet Javed Akhtar),ಎನ್‌ಸಿಪಿ ನಾಯಕ ಅಜಿತ ಪವಾರ್ (Ajith Pawar) ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತಿಚಿಗೆ ದಿಲ್ಲಿಯ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣಗಳನ್ನು ಮಾಡಿದ್ದ ಬಿಜೆಪಿಯ ಓರ್ವ ಸಂಸದ ಮತ್ತು ಶಾಸಕ ಸಮುದಾಯ (ಮುಸ್ಲಿಂ)ವೊಂದನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಕರೆ ನೀಡಿದ್ದರು. ಈ ಕರೆಯು ಅತ್ಯಂತ ಅಪಾಯಕಾರಿಯಾಗಿದೆ ಎಂದು ಪ್ರತಿಪಕ್ಷ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ಟೀಕಾಕಾರರು ಬಣ್ಣಿಸಿದ್ದರು.

‘ಪ್ರತಿಯೊಬ್ಬರೂ ವಿಭಿನ್ನರಾಗಿರಬಹುದು,ಆದರೆ ನಾವು ಒಂದಾಗಿ ಈ ದೇಶವನ್ನು ಕಟ್ಟಬಹುದು. ಇದನ್ನು ಗೆಳೆತನ ಎಂದು ಕರೆಯಲಾಗುತ್ತದೆ. ಧರ್ಮಗಳು ಪರಸ್ಪರ ದ್ವೇಷಿಸುವಂತೆ ಜನರಿಗೆ ಬೋಧಿಸುವುದಿಲ್ಲ. ಇದು ಹಿಂದುಸ್ಥಾನ. ಇದು ಪ್ರತಿಯೊಬ್ಬರಿಗೂ ಸೇರಿದೆ ’ಎಂದು ಅಬ್ದುಲ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News