ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರಕಾರಿ ಸೌಲಭ್ಯ ನೀಡದಿರಲು ಮಣಿಪುರ ಸರಕಾರ ನಿರ್ಧಾರ
ಇಂಫಾಲ್: ಇನ್ನು ಮುಂದೆ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಯಾವುದೇ ಸರಕಾರಿ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಎಂದು ಮಣಿಪುರ ಸರಕಾರ ಗುರುವಾರ ಹೇಳಿದೆ ಎಂದು 'ದಿ ಇಂಫಾಲ್ ಫ್ರೀ ಪ್ರೆಸ್' ವರದಿ ಮಾಡಿದೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಣಿಪುರ ರಾಜ್ಯ ಜನಸಂಖ್ಯಾ ಆಯೋಗವನ್ನು ಸುಗ್ರೀವಾಜ್ಞೆಯಾಗಿ ಅನುಮೋದಿಸುವ ಮೂಲಕ ನಾಲ್ಕು ಮಕ್ಕಳ ನೀತಿಯನ್ನು ಜಾರಿಗೊಳಿಸುವುದಾಗಿ ಸರಕಾರ ಹೇಳಿದೆ.
"ಒಮ್ಮೆ ಜಾರಿಗೊಳಿಸಿದ ಸುಗ್ರೀವಾಜ್ಞೆಯು' ದಂಪತಿ ಹೊಂದಬಹುದಾದ ಮಕ್ಕಳ ಸಂಖ್ಯೆಯನ್ನು ನಾಲ್ಕಕ್ಕೆ ಮಿತಿಗೊಳಿಸುತ್ತದೆ" ಎಂದು ಬುಡಕಟ್ಟು ವ್ಯವಹಾರಗಳ ಸಚಿವ ಲೆಟ್ಪಾವೊ ಹಾಕಿಪ್ ಹೇಳಿದ್ದಾರೆ.
'ದಿ ಸಂಗೈ ಎಕ್ಸ್‌ಪ್ರೆಸ್' ಪ್ರಕಾರ. "ಇನ್ನು ಮುಂದೆ ಯಾವುದೇ ದಂಪತಿ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆಂದು ಕಂಡುಬಂದರೆ ಎಲ್ಲಾ ಸರಕಾರಿ ಯೋಜನೆಗಳ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.